ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಎಸ್.ಎಫ್.ಐ ಆಗ್ರಹ…

ಇತ್ತೀಚಿಗೆ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಮತ್ತು ಗುಲ್ಬರ್ಗ ಮೂಲದ ಹತ್ತು ವರ್ಷದ ಬಾಲಕಿಯ ಮೈಸೂರಿನಲ್ಲಿ ಅತ್ಯಾಚಾರ ಕೊಲೆ ಪ್ರಕರಣ ,ಬೆಂಗಳೂರಿನ ಖಾಸಗಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ , ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಯಾಗಿಸಿ ಗಲ್ಲು ಶಿಕ್ಷೆ ನೀಡಬೇಕು ಎಂದು ಜಿಲ್ಲಾ ಅಧ್ಯಕ್ಷರಾದ ಶಿವುಕುಮಾರ್ ಈಚನಾಳ್ ಆಗ್ರಹಿಸಿದರು. ರಾಜ್ಯದಲ್ಲಿ ಇನ್ನು ಮುಂದೆ ಸದರಿ ಪ್ರಕರಣಗಳು ಮರುಕಣಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ಕರ್ನಾಟಕ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಗಂಗಾವತಿ ತಾಲೂಕ ಸಮಿತಿಯು ಈ ಮೂಲಕ ಅಗ್ರಹಿಸಿ ಗಂಗಾವತಿ ತಹಶೀಲ್ದಾರರಾದ ಶ್ರೀ ನಾಗರಾಜ್.ಯು ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕ ಅಧ್ಯಕ್ಷ ನಾಗರಾಜ.ಯು ತಾಲೂಕ ಉಪಾಧ್ಯಕ್ಷ ಶರೀಫ್. ಎಂ, ಜಂಟಿ ಕಾರ್ಯದರ್ಶಿಗಳಾದ ಬಸಯ್ಯ ಹಿರೇಮಠ್, ದರ್ಶನ, ಮುಖಂಡರಾದ ಮಾರುತಿ ವಿಠಲಪುರ ದೊಡ್ಡಬಸವ,ದುರ್ಗೇಶ,ಹನುಮೇಶ್, ಅಮೃತ,ಶುಶ್ಮಿತಾ,ಪವಿತ್ರ ಮುಂತಾದವರು ಉಪಸ್ಥಿತರಿದ್ದರು.

