ದಿನಾಂಕ 20 ರಂದು ಕದಳಿ ಮಹಿಳಾ ಸಮಾವೇಶ ಹಾಗೂ ರಾಜ್ಯಮಟ್ಟದ ಆಧುನಿಕ ಮಹಿಳಾ ವಚನೋತ್ಸವ….

ದಿನಾಂಕ 20 ರಂದು ಕದಳಿ ಮಹಿಳಾ ಸಮಾವೇಶ ಹಾಗೂ ರಾಜ್ಯಮಟ್ಟದ ಆಧುನಿಕ ಮಹಿಳಾ ವಚನೋತ್ಸವ….

ಗಂಗಾವತಿ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು. ಕದಳಿ ಮಹಿಳಾ ವೇದಿಕೆ ತಾಲೂಕ ಘಟಕ ಗಂಗಾವತಿ ನೇತೃತ್ವದಲ್ಲಿ ಇದೇ ದಿನಾಂಕ 20 ಭಾನುವಾರ ದಿನದಂದು ತಾಲೂಕ ಕದಳಿ ಮಹಿಳಾ ಸಮಾವೇಶ ಹಾಗೂ ರಾಜ್ಯಮಟ್ಟದ ಅಧುನಿಕ ಮಹಿಳಾ ವಚನೋತ್ಸವ ಸಮಾರಂಭವನ್ನು ಆನೆಗುಂದಿ ರಸ್ತೆಯಲ್ಲಿರುವ ಜ್ಞಾನ ಗಣಪತಿ ದೇವಸ್ಥಾನದ ದೈವಜ್ಞ ಸಭಾಭವನದಲ್ಲಿ ಜರುಗಲಿದೆ ಎಂದು ಅಧ್ಯಕ್ಷ ಡಾ. ಸಿ ಮಹಾಲಕ್ಷ್ಮಿ. ಕಾರ್ಯದರ್ಶಿ ಜಿ ಶ್ರೀದೇವಿ ಕೃಷ್ಣಪ್ಪ ಸಹ ಕಾರ್ಯದರ್ಶಿ ಮಾಲಾ ಶ್ರೀಧರ್ ವಿಜಯಲಕ್ಷ್ಮಿ ಸೂಗೂರು ಹಾಗೂ ಉಮಾ ಹೇಳಿದರು ಅವರು ಗುರುವಾರದಂದು ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಅಧುನಿಕ ಮಹಿಳಾ ವಚನೋತ್ಸವ ನಡೆಸಲಾಗುತ್ತಿದ್ದು ತಾಲೂಕ ಕದಲಿ ಮಹಿಳಾ ಸಮಾವೇಶ ಅಧುನಿಕ ವಚನ ಕೃತಿ ಶಬ್ದಕ್ಕೆ ನಾಚಿ ಡೊ ಡೆಂತಯ್ಯ ಕೃತಿ ಲೋಕಾರ್ಪಣೆ ಜ ರುಗಲಿದ್ದು ಬೆಳಿಗ್ಗೆ 10 ಗಂಟೆಗೆ ಸಮಾರಂಭವನ್ನು ಲಲಿತಾರಾಣಿ ಶ್ರೀರಂಗ ದೇವರಾಯರು ಅವರು ಉದ್ಘಾಟಿಸುವರು. ಕೃತಿ ಲೋಕಾರ್ಪಣೆಯನ್ನು ಲಕ್ಷ್ಮಿ ಅರುಣ ಜನಾರ್ಧನ್ ರೆಡ್ಡಿ ನೆರ ವೆರಿ ಸುವ ರು. ಡಾಕ್ಟರ್ ಸುಲೋಚನಾ ಚಿನಿವಾಲರ್. ಸಾವಿತ್ರಿ ಮುಜುಂದಾರ ನಿರ್ಮಲ ಬಳ್ಳೊಳ್ಳಿ ಶೋಭಾ ಪರಣ್ಣ ಮುನವಳ್ಳಿ ಸೇರಿದಂತೆ ಇತರರು ಗೌರವ ಉಪಸ್ಥಿತಿಯಲ್ಲಿದ್ದು. ಇದೇ ಸಂದರ್ಭದಲ್ಲಿ ಆಧುನಿಕ ಮಹಿಳಾ ವಚನಕಾರರಿಗೆ ಬಹುಮಾನ ವಿತರಣೆ ವಚನ ಸಾಹಿತ್ಯದಲ್ಲಿ ಮಹಿಳೆ ಅಂದು ಇಂದು. ಮಹಿಳಾ ವಚನಕಾರರಿಂದ ವಚನ ವಾಚನ ಎರಡು ಗೋಷ್ಠಿ ಜರುಗಲಿದ್ದು ಸಂಜೆ 5:00ಗೆ ಸಮಾರೋಪ ಜರುಗುವುದು ಎಂದು ಕಾರ್ಯಕ್ರಮದ ಕುರಿತು ವಿವರಿಸಿದರು.

Leave a Reply

Your email address will not be published. Required fields are marked *