ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮೋತ್ಸವ.
ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ. ಜನ್ಮದಿನದ ಉದ್ದೇಶ.. ಸವಿತಾ ನೇತ್ರಾಜ್ ಗುರುವಿನ ಮಠ…

ಗಂಗಾವತಿ.. ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯ ಧರ್ಮ ನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ನಿ ಸವಿತಾ ನೇತ್ರಾಜ್ ಗುರುವಿನ ಮಠ ಹೇಳಿದರು. ಅವರು ಶನಿವಾರದಂದು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ ಹರಿಸಿದನು. ಜೊತೆಗೆ ಅಧರ್ಮದಿಂದ ಕೂಡಿದ್ದ ಕೌರವರನ್ನು ಸೋಲು ಗೊಳ್ಳಲು ಶ್ರೀ ಕೃಷ್ಣನೇ ಕಾರಣರಾಗಿದ್ದು ಅವರ ತತ್ವ ಸಿದ್ಧಾಂತಗಳನ್ನು ಬಾಲ್ಯದಲ್ಲಿ ಮಕ್ಕಳು ಅಳವಡಿಸಿಕೊಳ್ಳಬೇಕೆಂಬು ಉದ್ದೇಶದಿಂದ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲಂಕಾರಗೊಳಿಸಿದ ತೊಟ್ಟಿಲಿಗೆ ಪೂಜಿ ಸಲ್ಲಿಸಿ ಶ್ರೀ ಶ್ರೀ ಕೃಷ್ಣ ಜಯಂತೋತ್ಸವ ಆಚರಿಸುವುದರ ಜೊತೆಗೆ ವೇಷಧಾರಿ ಶ್ರೀ ಕೃಷ್ಣ ಹಾಗೂ ರಾಧೆಯ ಬಾಲ್ಯ ತುಂಟತನ ಮೊಸರು ಗಡಿಗೆ ಆಟ ಬೆಣ್ಣೆ ಕದಿಯೋ ರೂಪಕಗಳನ್ನು ನೆರವೇರಿ ಸೋದರ ಮೂಲಕ ಅರ್ಥಪೂರ್ಣ ಆಚರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ನೇತ್ರಾಜ ಗುರುವಿನ ಮಾತು ಪೂರ್ಣಿಮಾ ನಾಗರತ್ನ ಲತಾ ಶ್ರೀ . ರೇಷ್ಮಾ ಶಿಲ್ಪ ವೈಷ್ಣವಿ ಸುಮಾ ಜ್ಯೋತಿ ಮಂಜುನಾಥ ಸೇರಿದಂತೆ ವಕೀಲ ಭೀಮರಾಯ ಹಾಗೂ ಪಾಲಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

