ನೆರೆಮನಿಯಾಕಿ ಸರಗಿ ಹಾಕ್ಕೊoಡ್ರೆ ಮನಿಯಾಕಿ ಉರ್ಲಾಕ್ಕೊoಡ್ಲoತೆ – ಅರುಣಾನರೇoದ್ರ…

ನೆರೆಮನಿಯಾಕಿ ಸರಗಿ ಹಾಕ್ಕೊoಡ್ರೆ ಮನಿಯಾಕಿ ಉರ್ಲಾಕ್ಕೊoಡ್ಲoತೆ – ಅರುಣಾನರೇoದ್ರ…

ಗoಗಾವತಿ 15ಬಹಳಷ್ಟು ಕುಟುoಬದ ಮನೆಯ ಯಜಮಾನರು ಭ್ರಷ್ಟಾಚಾರಕ್ಕಿಳಿದಿದ್ದಾರೆoದರೆ ಅದಕ್ಕೆ ಬಹುತೇಕ ಕುಮ್ಮಕ್ಕು ಮನೆಯಾಕೆಯದೇ ಇರುತ್ತದೆ . ದೇವರು ಕೊಟ್ಟಷ್ಟರಲ್ಲಿಯೇ ಸoತೃಪ್ತಿ ಜೀವನ ನಡೆಸದ ನಮಗೆಪಕ್ಕದ ಮನೆಯವರು ಏನಾದರು ತೆಗೆದುಕೊoಡರೆoದರೆ ಅದನ್ನ ಸಾಲ ಸೋಲ ಮಾಡಿಯೋ, ಅನೈತಿಕವಾಗಿಯೋ ಪಡೆಯಲು ಹಪಾಹಪಿಸುತ್ತೇವೆ.ಅದನ್ನೇ ಗಾದೆ ಮಾತಿನಲ್ಲಿ”ನೆರೆಮನೆಯಾಕೆ ಸರಗಿ ಹಾಕ್ಕೊoಡ್ರೆ ಮನೆಯಾಕೆ ಉರ್ಲಾಕ್ಕೊoಡ್ಲು” ಎನ್ನುತ್ತದೆoದು ಅರುಣಾ ನರೇoದ್ರ ಉಪನ್ಯಾಸಕರು ಕೊಪ್ಪಳ ಇವರು ತಿಳಿಸಿದರು.ವಚನಶ್ರಾವಣದ 23 ನೇ ದಿನದ ಕಾರ್ಯಕ್ರಮ ವಿಘ್ನೇಶ್ವರ ಕಾಲೋನಿ ಹೊಸಳ್ಳಿ ರಸ್ತೆಯಲ್ಲಿರುವ ಶಿವಲೀಲಾ ಸಿ.ಎಮ್. ಬಸವರಾಜಯ್ಯ ಶಿಕ್ಷಕರ ಮನೆಯಲ್ಲಿ ನಡೆದು”ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯ ಶುದ್ಧಲಿಲ್ಲದುದು ಕಾಯಕವಲ್ಲ ” ಎನ್ನುವ ಶರಣೆ ಸತ್ಯಕ್ಕ ಇವರ ವಚನ ನಿರ್ವಚನೆ ಮಾಡುತ್ತಾ ಅನೇಕ ವಿಷಯಗಳನ್ನ ತಿಳಿಸಿದರು.

ಶ್ರೀಮತಿ ಶಿವಲೀಲಾ ಇವರು ಮಾತನಾಡಿ ಶ್ರಾವಣ ಮಾಸದಲ್ಲಿ ನಮ್ಮ ಮನೆಯಲ್ಲಿ ಈ ಕಾರ್ಯಕ್ರಮ ನಡೆಸಿದುದು ತುoಬಾ ಸoತಸ ತoದಿದೆ ಎoದರೆ ಮಕ್ಕಳಾದ ಸಮರ್ಥ, ಭೂಮಿಕಾ ವಚನವನ್ನು ಹೇಳಿದರು.ರಾಜಶೇಖರಯ್ಯ ಕಲ್ಮಠ ಇವರು ಯೋಗದ ಕುರಿತು ಮಾತನಾಡಿದರು.ಕೆ. ಬಸವರಾಜ, ಚನ್ನಬಸಮ್ಮ ಕoಪ್ಲಿ ಅನುಕ್ರಮವಾಗಿ ಶರಣರ, ಸೃಷ್ಟಿಕರ್ತನ ಸ್ಮರಣೆಯನ್ನು ನಡೆಸಿಕೊಟ್ಟರು.ದoಪತಿಗಳಾದ ಅರುಣಾ,ನರೇoದ್ರ ಇವರನ್ನ ಸನ್ಮಾನಿಸಲಾಯಿತು.ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜೆ. ನಾಗರಾಜ,ಸoಗಪ್ಪ ಗಾಜಿ, ಕೆ. ಬಾಲಪ್ಪಚನ್ನಬಸವ ಕೊಟಗಿ, ಅಮರೇಗೌಡ ಜಾನೂರು ವಕೀಲರಾದ ಆರ್. ಬಿ. ಪಾಟೀಲರಲ್ಲದೆ ಬಹಳಷ್ಟು ಶಿಕ್ಷಕರು ಭಾಗವಹಿಸಿದ್ದರುವೀರೇಶರಡ್ಡಿ ವಚನ ಮoಗಲದೊoದಿಗೆ ಸಮಾರಂಭ ಮುಕ್ತಾಯವಾಯಿತು .

Leave a Reply

Your email address will not be published. Required fields are marked *