ಸ್ವಶ್ಚತಾ ಸಿಬ್ಬಂದಿಯನ್ನು ಕೂಡಲೇ ಬದಲಿಸುವಂತೆ ಕ್ರಮಕ್ಕೆ ಕೋರಿ ಮನವಿ…

ಸ್ವಶ್ಚತಾ ಸಿಬ್ಬಂದಿಯನ್ನು ಕೂಡಲೇ ಬದಲಿಸುವಂತೆ ಕ್ರಮಕ್ಕೆ ಕೋರಿ ಮನವಿ…

ವಿಧ್ಯೇಯ ವಿದ್ಯಾರ್ಥಿಗಳು ಡಾ” ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಹೊಸಹಳ್ಳಿ) ಕೂಡ್ಲಿಗಿ ವಿಜಯನಗರದ ಜಿಲ್ಲೆ..

ಸ್ವಾಮಿ- ಈ ಕೆಳಗೆ ಸಹಿ ಮಾಡಿರುವ ನಾವು ಕೂಡ್ಲಿಗಿ ಡಾ ॥ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ (ಹೊಸಹಳ್ಳಿ) ಕೂಡ್ಲಿಗಿ. ನಾವು 2025 ನೇ ವರುಷ ದಲ್ಲಿ. SSLC ಹಾಗೂ 9, 8 ,7ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು. ನಮ್ಮ ಹಾಸ್ಟೆಲ್ ನ ಸ್ವಚ್ಚತಾ ಸಿಬ್ಬಂದಿ ಮಹಿಳೆಯಾದ ಕೆ.ರೇಣುಕಮ್ಮ ಎಂಬ ಆಂಟಿಯು. ತನ್ನ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ , ಸರಿಯಾಗಿ ಸ್ವಚ್ಚತೆ ಮಾಡುತ್ತಿಲ್ಲ ಹೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ , ನಿಮ್ಮ ಕಸ ದೂಳನ್ನು ನಾನು ಸ್ವಚ್ಚಗೊಳಿಸಬೇಕೆ ಎಂದು ನಮ್ಮ ಮೇಲೆ ದರ್ಫತೋರುತ್ತಾಳೆ. ಯಾವ ಪ್ರಾಂಶುಪಾಲರಿಗೆ ಹೇಳಿಕೊಳ್ಳಿ ವಾರ್ಡನ್ ಗೇ ಹೇಳಿಕೊಳ್ಳಿ . ನಾನು MLA ಯವರಿಂದ ರೆಕ್ಮೆಂಡ್ ಲೆಟರ್ ತಂದಿದೀನಿ ಅಂತ ಬೊಬ್ಬೆ ಹೋಡಿತಾಳೆ. ಈ ಯಮ್ಮ MLA ರ ಹತ್ತಿರ ಆತ್ತು ಕರೆದು ಕಣ್ಣೀರು ಹಾಕಿ ಲೆಟರ್ ತಂದಾಳ. ಪಾಪ ಆವರಿಗೆ ಈ ಹೆಂಗಸಿನ ಬಗ್ಗೆ ಗೊತ್ತಿಲ್ಲ ಅನಿಸುತ್ತದೆ. ಕೆಲಸ ಮಾಡಲ್ಲ, ಹಾಸ್ಟೆಲ್ ನ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಜಗಳ ಹಾಗೂ ಅನಾವಶ್ಯಕ ವಾದಿ ಮಾಡುತ್ತಾಳೆ. ಪ್ರಾಂಶುಪಾಲರಿಗೂ ಕೇರ್ ಮಾಡಲ್ಲ ಆಯಮ್ಮ , ಇದು ಒಂದು ವರ್ಷದಿಂದ ನಡೆಯುತ್ತಲೇ ಇದೆ. ಈ ಹಿಂದೆ SSLC ಪರೀಕ್ಷೆ ಸಂದರ್ಭದಲ್ಲಿ , ಯಾರಿಗೂ ಏಳದೇ ಕೇಳದೇ 15ದಿನಗಳ ಕಾಲ ದುರುದ್ಧೇಶ ಪೂರ್ವಕವಾಗಿ ಗೈರು ಹಾಜರಾಗಿದ್ದು, ಈ ಮೂಲಕ ನಮಗೆ ಕಿರಿ ಕಿರಿ ಉಂಟು ಮಾಡಿದ್ದಾಳೆ. ಆಯಮ್ಮ ರೆಕ್ಮೆಂಡ್ ಬಳಸಿ ಡಾಕ್ಟರ್ ರಿಂದ ಪತ್ರ ಮಾಡಿಸಿದ್ದಾಳೆ ಅಯಮ್ಮ. ಅಯಮ್ಮಗೆ ಕಿಡ್ನಿಯಲ್ಲಿ ತೀವ್ರ ತೊಂದರೆ ಇದ್ದು ಗಂಭೀರ ಸಮಸ್ಯೆಯಿಂದ ಬಳಲುತಿದ್ದಾಳೆ. ಅದಕ್ಕಾಗಿ ಕೆಲಸ ಮಾಡೋ ಶಕ್ತಿಯಿಲ್ಲ , ಆದರೆ ಸಂಬಳದಾಸೆಗೆ ಕೆಲಸಕ್ಕೆ ಬಂದು ಎಲ್ಲರಿಗೆ ತಲಿಬೇನೆ ಆಗಿದ್ದಾಳೆ. ನಮಗೆ ಮೊದಲು ಆಯಮ್ಮಳನ್ನ ಬಿಡಿಸಿ ಬೇರೆ ಕೆಲಸಗಾರರನ್ನು ಕರೆದುಕೋಳ್ಳಬೇಕು. ಅಯಮ್ಮನ ಕೈಲಿ ಏನೂ ಕೆಲಸ ಮಾಡಕಾಗಲ್ಲ. ನಾವು MLAಯವರಿಗೆ ಲೆಟರ್ ಬರಿತೀವಿ ಕೇಳಕಂತೀವಿ , ಆಯಮ್ಮಳನ್ನು ತೆಗಿರಿ ಬೇರೆಯವರನ್ನು ಸೇಿರಿಸಿಕೊಳ್ಳಿಯಂತ ಕೇಳಿಕೊಳ್ಳುತ್ತೇವೆ. ನಮಗೆ ನಮ್ಮ SCST ಸಮಾಜದವರನ್ನೇ ಕೆಲಸಕ್ಕೆ ಕರಕಬೇಕು. ಪ್ರಾಂಶುಲರು ಹಾಗೂ ವಾರ್ಡನ್ ಇಬ್ಬರೂ ಸೇರಿ , ಈಯಮ್ಮಗೇ ಸಪೋರ್ಟ್ ಮಾಡುತ್ತಾರೆ. ಅಬರಿಬ್ಬರಿರಬೇಕಂದರೆ ಈಯಮ್ಮನ ತೆಗಿರಿ , ಆಯಮ್ಮ ಇರಬೇಕೆಂದರೆ ವಾರ್ಡನ್ ಪ್ರಾಂಶುಪಾಲ್ ಮೇಡಮ್ ರಿಬ್ಬರನ್ನು ಬೇರೆ ಕಡೆ ಕಳಿಸಿ. ಕಾರಣ ಆಯಮ್ಮಳನ್ನು ಕೂಡಲೇ ಕೆಲಸದಿಂದ ಬಿಡಿಸಬೇಕು , ಇದಾವುದು ಆಗಲ್ಲ ಅಂದರೆ ವಿದ್ಯಾರ್ಥಿಗಳಾದ ನಾವೇ ಹಾಸ್ಟೆಲ್ ಬಿಟ್ಟು ಹೋಗುತ್ತೇವೆ. ಇದು ವರ್ಷದಿಂದ ಆಗುತ್ತಿರುವ ತೊಂದರೆಯಾಗಿದೆ. ಈವರೆಗೆ ಸಹಿಸಿಕೊಂಡಿದ್ದಿವಿ ಆದರೆ ಆಯಮ್ಮಳ ದುರಹಂಕಾರ ಮಿತಿ ಮೀರಿದೆ, ನಮಗೆ ಸಹಿಸಿಕೊಳ್ಳಲಿಕಾಗಲ್ಲ . ತಾವು ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ , ಆ ಸ್ವಚ್ಚತಾ ಸಿಬ್ಬಂದಿ ರೇಣುಕಮ್ಮ ಆಂಟಿಯನ್ನು ಮೊದಲು ತೆಗೆದು ಹಾಕಿ. ಬೆಳಿಗ್ಗೆ 7:30 ಕ್ಕೆ ಕೆಲಸಕ್ಕೆ ಹಾಜರಿರಬೇಕು , ಆಯಮ್ಮ 8:30 ಕ್ಕೆ 9 ಗಂಟೆಗೆ ಬರುತ್ತಾಳೆ. ಮದ್ಯಾಹ್ನ 2 :30 ಕ್ಕೆ ಹಾಜರ‍ಗಬೇಕು ಆಯಮ್ಮ 4:30 ಕ್ಕೆ ಬರುತ್ತಾಳೆ. ಇದ್ಯಾವ ಲೆಕ್ಕ ಆಯಮ್ಮಗೇ ಸ್ಪೆಷಲ್ ಎಕೆ..!?, ಪ್ರಾಂಶುಪಾಲರು ವಾರ್ಡನ್ ಇಬ್ಬರೂ ಮಾತನಾಡೋದಿಲ್ಲ. ಸುಮ್ಮನಿರುತ್ತಾರೆ. ಕಾರಣ ಸೂಕ್ತ ಕ್ರಮ ಕೈಗೊಳ್ಳಿ ನಿರ್ಲಕ್ಷ್ಯ ತೋರಿದ್ದಲ್ಲಿ . ನಾವೆಲ್ಲರು ಬಳ್ಳಾರಿಯ ಡಿಸಿಗೆ ದೂರು ನೀಡಬೇಕ‍ಾಗುತ್ತೆ. ವಂದನೆಗಳೊಂದಿಗೆ. ವಿಧ್ಯೇಯ ವಿದ್ಯಾರ್ಥಿಗಳು ಡಾ” ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಹೊಸಹಳ್ಳಿ) ಕೂಡ್ಲಿಗಿ ವಿಜಯನಗರದ ಜಿಲ್ಲೆ

Leave a Reply

Your email address will not be published. Required fields are marked *