ಸಮಾಜ ಸೇವಕರಾದ ಶ್ರೀ ಕಮಲ ರಾಮರಾವ್ ಮತ್ತು ಮಕ್ಕಳಿಂದ 25ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮ,,,

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಐತಿಹಾಸಿಕ ಪ್ರಸಿದ್ಧ ಶ್ರೀ ಬಾಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ತುಂಗಭದ್ರ ನದಿ ದಂಡೆಯ ಪಕ್ಕದ ಪ್ರವಾಸಿ ಮಂದಿರದ ಪ್ರದೇಶದಲ್ಲಿ ಸಮಾಜ ಸೇವಕರಾದ ಶ್ರೀ ಕಮಲ ರಾಮರಾವ್ ಕುಟುಂಬ ವರ್ಗದವರು ಕಳೆದ 25 ವರ್ಷಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು ಸಣಾಪುರ ಗ್ರಾಮದ ಹಿರಿಯರಾಗಿರುವ ಪತ್ರಕರ್ತರಾದ ಕೆ ಮಲ್ಲಿಕಾರ್ಜುನ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವೈ ರಮೇಶ್ ಚಿತ್ರನಟ ವಿಷ್ಣು ತೀರ್ಥ ಜೋಶಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಅಶೋಕ ಸದಸ್ಯರಾದ ಕೆ ನಾಗೇಶ್ ಶೇರ್ ಖಾನ್ ಪಿಡಿಓ ಶ್ರೀಮತಿ ವತ್ಸಲ ಮಾಜಿ ಉಪಾಧ್ಯಕ್ಷರಾದ ನರಸಿಂಹಲು ಬಿಜೆಪಿ ಕಾರ್ಯಕರ್ತರಾದ ಕಾಕರ್ಲ ಶ್ರೀನಿವಾಸ್ ಬಿಜೆಪಿ ಯುವ ಮೋರ್ಚಾ ಮುರಳಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿರುವ ಸಮಾಜ ಸೇವಕರಾದ ಕಮಲ ರಾಮರಾವ್ ಮಕ್ಕಳಾದ ಕಮಲ ವೆಂಕಟೇಶ್ ಹಾಗೂ ಕಮಲ ಕೃಷ್ಣ ಅವರುಗಳು ಉಪಸ್ಥಿತರಿದ್ದರು.

