ಹುತಾತ್ಮ ಯೋಧರ ಪುತ್ತಳಿಗೆ ಮಾಲಾರ್ಪಣೆ ಮುಖಾಂತರ 79ನೆಯ ಸ್ವಾತಂತ್ರೋತ್ಸವ…

ಮಾನ್ವಿ ಲಂಚ ಮುಟ್ಟುವ ಕೈಯಲ್ಲಿ ರಾಷ್ಟ್ರಧ್ವಜ ಮುಟ್ಟಬೇಡಿ, ಭ್ರಷ್ಟರನ್ನು ಹೊಗಳುವ ಬಾಯಲ್ಲಿ ರಾಷ್ಟ್ರಗೀತೆ ಆಡ್ಬೇಡಿ ಹಾಗೆ ನಮ್ಮ ತಾಲೂಕಾಡಳಿತ ಜನಪ್ರತಿನಿಧಿಗಳು ಶಿಕ್ಷಣ ಸಂಸ್ಥೆಗಳು ಸಂಘ ಸಂಸ್ಥೆಗಳು ನಮ್ಮ ಹುತಾತ್ಮ ಯೋಧನ ಪುತ್ತಳಿಗೆ ಮಾಲಾರ್ಪಣೆ ಮಾಡುವ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಕೆ ಆರ್ ಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರಮೇಶ್ ನಾಯಕ ತಮ್ಮ ಅನಿಸಿಕೆಯಲ್ಲಿ ಎಲ್ಲರನ್ನು ಎಚ್ಚರಿಸಿದರುಈ ದಿನ 79ನೆಯ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಹುತಾತ್ಮ ಯೋಧನ ಕಂಚಿನ ಪುತ್ತಳಿಗೆ ಮಾಲಾರ್ಪಣೆ ಪೂಜಾ ಕಾರ್ಯಕ್ರಮ ಮಾಜಿ ಯೋಧರಾದ ಡಿ ಹನುಮಂತನ ಸಲಾಪುರ್ ನೆರವೇರಿಸಿದರು ನಂತರ ಮಾತನಾಡಿದ ಮಾಜಿ ಯೋಧರ ತಾ ಅಧ್ಯಕ್ಷರಾದ ಬಸವರಾಜ ಮುಸ್ಟೂರ ಸ್ವಾತಂತ್ರ್ಯಕ್ಕೋಸ್ಕರ ವೀರಮರಣವನ್ನಪ್ಪಿದ ಎಲ್ಲಾ ಹಿರಿಯ ಸೇನಾನಿಗಳನ್ನು ನಾವು ನೆನಪಿಸಲೇಬೇಕು ಇಲ್ಲವಾದರೆ ನಮ್ಮ ಜೀವನ ವ್ಯರ್ಥ ಅದಕ್ಕಾಗಿ ಹಿರಿಯ ಸೇನಾನಿಗಳ ಆದರ್ಶ ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದರು

ಈ ಸಂದರ್ಭದಲ್ಲಿ ಸಾದಾಪುರ ಗ್ರಾಮದ ಯುವ ಮುಖಂಡರು ಹಾಗೂ ಮಂಜುನಾಥನ ಕುಟುಂಬದವರು ಗ್ರಾಮದ ಶಾಲೆಯ ಮಕ್ಕಳು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮಾಜಿ ಯೋಧರಾದ ಜೆಲ್ಲಿ ಆಂಜನೇಯ್ಯ ನೀರಮಾನ್ವಿ ಓಬಳೇಶ್ ಸುಂಕೇಶ್ವರ್ ತಾಂಡ ಹಾಗೂ ಹಾಲಿ ಯೋಧರಾದ ಬಸವರಾಜ ಸಾದಪುರ ಜೆಲ್ಲಿ ಸಂಜೀವ ನಾಯಕ ಕೆ ಶರಣಬಸವ ನಾಯಕ ಲಘು ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದು ಸ್ವಾತಂತ್ರ ದಿನಾಚರಣೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಮಂಜುನಾಥನ ಕುಟುಂಬಸ್ಥರು ಬಂದಂತ ಎಲ್ಲಾ ದೇಶ ಪ್ರೇಮಿಗಳಿಗೆ ಸಿಹಿ ಹಂಚಿದರು.
