ಸಂತ ಸೇವಾಲಾಲ ಜಯಂತಿ ಸ್ವಾಭಿಮಾನ ಕಲಿಸಿದ ಸಂತ,ಶಂಕರ್ ನಾಯ್ಕ ..

ಸಂತ ಸೇವಾಲಾಲ ಜಯಂತಿ ಸ್ವಾಭಿಮಾನ ಕಲಿಸಿದ ಸಂತ,ಶಂಕರ್ ನಾಯ್ಕ ..

ಗಂಗಾವತಿ.15 ಸಮೀಪದ ಸೂರ್ಯನಾಯಕ ತಾಂಡದಲ್ಲಿ ಭಾನುವಾರ ಪ್ರತಿವರ್ಷದಂತೆ ಗ್ರಾಮದಲ್ಲಿ ಸಂತ ಸೇವಾಲಾಲ 287ನೇ ಜಯಂತಿಯನ್ನು ಆಚರಿಸಲಾಯಿತು,ಮೆರವಣಿಗೆ ಚಾಲನೆ ನೀಡಿ‌ಮಾತನಾಡಿದ ಸಮಾಜದ ಹಿರಿಯ ಮುಖಂಡರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಶಂಕರ್ ನಾಯ್ಕ ಸಮುದಾಯದ ಸಾಂಸ್ಕೃತಿಕ ನಾಯಕ ಸಂತ ಸೇವಾಲಾಲರು, ಭೀಮ ನಾಯ್ಕ್‌ ಮತ್ತು ಧರ್ಮಿಣಿ ಯಾಡಿ ದಂಪತಿಯ ಮೂರನೇ ಮಗ. ಕರ್ನಾಟಕದ ಸೂರಗೊಂಡನಕೊಪ್ಪದಲ್ಲಿ ರಾಮವತ್ ಎನ್ನುವ ಬುಕ್ಯಾ ಬೆಡಗದಲ್ಲಿ 1739ರ ಫೆಬ್ರುವರಿ 15ರಂದು ಜನಿಸಿದರು.

ಶಿರಸಿಯ ಮಾರಿಕಾಂಬ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗಿ ಸಂತನಾದರು. ಬಾಲ್ಯದಿಂದಲೂ ಸಂತ ಪರಂಪರೆಯ ಕಡೆಗೆ ಒಲವನ್ನು ಹೊಂದಿದ ಸೇವಾಲಾಲರು, ತಮ್ಮ ಪವಾಡಗಳಿಂದ ಸೇವಾ ‘ಭಾಯ’ (ಅಣ್ಣ) ಆದರು. ಹೆಂಗಸರು, ಗಂಡಸರು ‘ಭಾಯ’ ಎನ್ನುವುದರಿಂದಾಗಿ ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿದು ಬಿಟ್ಟರು. ಸಮುದಾಯದವರು ಅಂದು ಬದುಕಿದ್ದ ಸ್ಥಿತಿಯನ್ನುಕಂಡು ಅವರ ಬದುಕಿಗೆ ಒತ್ತಾಸೆಯಾಗಿ ನಿಂತು ದುಡಿಮೆ, ಜ್ಞಾನಾರ್ಜನೆ, ಸ್ವಾಭಿಮಾನ, ಸ್ವಾವಲಂಬನೆ ಕುರಿತು ಅರಿವು ಮೂಡಿಸಿದ್ದರು ಎಂದು ಹೇಳಿದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ ಶಂಕರ್ ನಾಯ್ಕ, ಸಮಾಜದ ಮುಖಂಡರಾದ ಹನುಮಂತಪ್ಪ ಕಟ್ಟಿಮನಿ,ಪೂಜಾರಿ ಹನುಮಂತಪ್ಪ, ಸಂಕ್ರಪ್ಪ ಕೆ,ಶಂಕ್ರಪ್ಪ, ಯಮನೂರ,ಶಿವಪ್ಪ,ಪಂಪಾಪತಿ,ಕುಮಾರ,ಮಂಜುನಾಥ,ಶಿವು,ಮಹಿಳಾ ಮುಖಂಡರಾದ ಪಾರಮ್ಮ ಕಟ್ಟಿಮನಿ,ಲಾಲಮ್ಮ,ಶಾಂತಮ್ಮ,ಗುಂಡಮ್ಮ ಹಾಗೂ ಗ್ರಾಮದ ಮುದ್ದು ಮಕ್ಕಳು ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *