ರೈತ ಸಂಪರ್ಕ ಕೇಂದ್ರದಲ್ಲಿ ಆಡಹಗಲೇ ಮೋಸ ಭೇದಿಸಿದ ಕೆ ಆರ್ ಎಸ್ ಪಕ್ಷದ ಸೈನಿಕರು..

ಒಬ್ಬೊಬ್ಬ ರೈತನ ಹತ್ತಿರ 300 ರುಪಾಯಿ #ವಸೂಲಿ.ಅದು ಒಬ್ಬ ಮಧ್ಯವರ್ತಿಯನ್ನು ಇಟ್ಟುಕೊಂಡು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಆದ AO ಮತ್ತು ಅಕೌಂಟೆಂಟ್ ಸೇರಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಮಧ್ಯವರ್ತಿಯನ್ನಾಗಿ ಮಾಡಿಕೊಂಡು ದಿನಾಂಕ 13.08.2025 ರಂದು ರೈತರಿಗೆ ಕೃಷಿ ಉಪಕರಣಗಳನ್ನು ನೀಡುವ ಸಂಧರ್ಭದಲ್ಲಿ ಗೋದಾಮಿನ ಬಳಿ ಒಬ್ಬೊಬ್ಬ ರೈತನಿಂದ ಬರೋಬ್ಬರಿ 300 ರೂಪಾಯಿ (ಅನಧಿಕೃತವಾಗಿ) ವಸೂಲಿ ಮಾಡುತ್ತಿರುವ ಸಂದರ್ಭವನ್ನ ನೀವು ಗಮನಿಸಬಹುದು.
ಈ ವಿಷಯ ತಿಳಿದ KRS ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ಶಿವರಾಜ್ ಮತ್ತು ರಾಯಚೂರು ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಗಂಗಪ್ಪ ಕಬ್ಬೇರ ಇವರು ರೈತರ ಬೆಂಬಲಕ್ಕೆ ನಿಂತು ಅಂಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಾಕ್ಕಗಿ ಅನರ್ಥ ಉತ್ತರ ಕೊಡುವದು ಮತ್ತು ಅವರು ಮಾಡಿದ ತಪ್ಪಿಗೆ ಒಪ್ಪುವುದೂ ಸೇರಿದಂತೆ ಕೊನೆಗೆ ಅಧಿಕಾರಿಗಳು ಸುಮಾರು 30 ರೈತರ ಬಳಿ 300 ರೂಪಾಯಿಯಂತೆ 9000 ಸಾವಿರ ರುಪಾಯಿ ಕಕ್ಕಿರುವ ಪ್ರಕರಣ ಬಯಲಿಗೆ ಬಂದಿದೆ.

ರಾಜ್ಯದಲ್ಲಿ ಈಗಾಗಲೇ ರೈತರಿಗೆ ನೂರಾರು ಕಷ್ಟಗಳು ಉತ್ತಮ ಮುಂಗಾರಿನ ನಡುವೆ ರಾಸಾಯನಿಕ ಗೊಬ್ಬರಗಳು ಮತ್ತು ಕೃಷಿ ಚಟುವಟಿಕೆಯ ಉಪಕರಣಗಳು ಸಿಗದಿರುವುದು ತುಂಬಾ ಸಮಸ್ಯೆಗಳ ನಡುವೆ ಅಧಿಕಾರಿಗಳು ಈ ರೂಪದಲ್ಲಿ ವಸೂಲಿಗಳಿದ್ದು ರೈತರ ಜೀವನದ ಜೊತೆ ಚೆಲ್ಲಾಟ ಆಡುವಂತಹ ಸಂದರ್ಭವನ್ನು ಗಮನಿಸಿದಾಗ ಮಾನ್ಯ ಸ್ಥಳೀಯ ಜನಪ್ರತಿನಿಧಿಗಳು ,ತಾಲೂಕಡಳಿತ,ಜಿಲ್ಲಾಧಿಕಾರಿಗಳು, ಕೃಷಿ ಸಚಿವರು ಮತ್ತು ರಾಜ್ಯ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವ ಅನುಮಾನ ಸೃಷ್ಟಿಯಾಗುತ್ತಿದೆ.

ಈ ವಿಡಿಯೋವನ್ನು ಗಮನಿಸಿದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಸೂಲಿಗೆ ಇಳಿದ ಅಧಿಕಾರಿಗಳು ಮತ್ತು ಇನ್ನಿತರ ಮೇಲೆ ಸುಮೋಟೋ ಆಕ್ಷನ್ ರೂಪದಲ್ಲಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕವು ಆಗ್ರಹಿಸುತ್ತದೆ. ಇದೇ ಸಂದರ್ಭದಲ್ಲಿ ನಿರುಪಾದಿ ಕೆ ಗೋಮರ್ಸಿ
ರಾಜ್ಯ ಕಾರ್ಯದರ್ಶಿ
ರಾಜ್ಯ ರೈತ ಘಟಕ