ಹಿರೇಬೆಣಕಲ್ ಸಂರಕ್ಷಣೆಗೆ ಗುಡ್ಲಾನೂರರಿಂದ ಮೌನ ಧ್ಯಾನ ಪ್ರಾರಂಭ…

ಗಂಗಾವತಿ ತಾಲೂಕಿನ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆಯ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಸತತವಾಗಿ ಪ್ರಯತ್ನಿಸುತ್ತಿರುವ ಮಂಜುನಾಥ ಗುಡ್ಲಾನೂರ್, ಫೆಬ್ರವರಿ 13, 14 ಮತ್ತು 15, 2026ರಂದು ಮೂರು ದಿನಗಳ ಮೌನ ಧ್ಯಾನ ವ್ರತ ಕೈಗೊಂಡಿದ್ದಾರೆ.ಈ ವೇಳೆ ನೆಲೆ ಸಂರಕ್ಷಣೆ, ಪ್ರವಾಸಿಗರ ಸುರಕ್ಷತೆ, ರಸ್ತೆ ಸೌಲಭ್ಯ, ಸಂಶೋಧನೆ, ವಾಹನ ನಿಲುಗಡೆ ಮತ್ತು ಪಾರ್ಕ್ ನಿರ್ಮಾಣ ಸೇರಿ ಆರು ಸಂಕಲ್ಪಗಳನ್ನು ಮಾಡಲಿದ್ದಾರೆ. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶ-ವಿದೇಶಗಳ ಅಭಿಮಾನಿಗಳನ್ನು ಪಾಲ್ಗೊಳ್ಳುವಂತೆ ಗುಡ್ಲಾನೂರ್ ಆಹ್ವಾನಿಸಿದ್ದಾರೆ.ದಿನಾಂಕ 13 ರಂದು ಕಾರ್ಯಕ್ರಮ ಪ್ರಾರಂಭವಾಗಿದೆಇದು ಯಾರ ವಿರುದ್ಧದ ಚಳುವಳಿಯಲ್ಲ, ಬದಲಿಗೆ ಶಿವನಲ್ಲಿ ಮೌನ ಧ್ಯಾನದ ಮೂಲಕ ಪರಂಪರೆ ಸಂರಕ್ಷಣೆಗಾಗಿ ಮಾಡುವ ಆಧ್ಯಾತ್ಮಿಕ ಯಾತ್ರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
