ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ.

ಬಳ್ಳಾರಿ / ಕಂಪ್ಲಿ : ಸಮೀಪದ ಹೊಸ ದರೋಜಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಾರುತಿ ಕಣ್ಣಿನ ಹಾಸ್ಪಿಟಲ್ ಗಂಗಾವತಿ ಇವರ ಸಹಬಾಗಿತ್ವದಲ್ಲಿ ಹೊಸ ದರೋಜಿ ಗ್ರಾಮದ ಜನರಿಗೆ ಶನಿವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ನಡೆಸಲಾಯಿತು. ಈ ತಾಲೂಕಿನ ಯೋಜನಾಧಿಕಾರಿ ರಾಘವೇಂದ್ರ ಉದ್ಘಾಟಿಸಿ ಮಾತನಾಡಿ ಹುಟ್ಟಿನಿಂದಲೇ ದೃಷ್ಟಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಆದರೆ ಬಹಳಷ್ಟು ಮಂದಿ ತಮ್ಮ ನಿರ್ಲಕ್ಷೃದಿಂದ ಕಣ್ಣು ಕಳೆದುಕೊಂಡವರಿದ್ದಾರೆ. ಆದ ಕಾರಣ ದೃಷ್ಟಿ ಇದ್ದವರು ಕಣ್ಣಿನ ರಕ್ಷಣೆಗೆ ಒತ್ತು ನೀಡಬೇಕು ಎಂದರು. 140ಕ್ಕೂ ಹೆಚ್ಚು ಫಲಾನುಭವಿಗಳು ಉಚಿತ ಚಿಕಿತ್ಸೆ ಪಡೆದುಕೊಂಡರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಗುರುಮೂರ್ತಿ, ಗ್ರಾಮದ ಪ್ರಮುಖರಾದ ನಟೇಲ್ ಹೊನ್ನೂರಸಾಬ್, ಬಳ್ಳಾರಿ ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಮಹಮ್ಮದ್ ಅಲಿ ಟಿಪಿ, ಸಮನ್ವಯಾಧಿಕಾರಿ ರವಿಕುಮಾರ್, ಆರೋಗ್ಯ ಸಹಾಯಕಿ ಭಾಗ್ಯಶ್ರೀ,ಮೇಲ್ವಿಚಾರಕ ರಾಜು D K, ಕೃಷಿ ಮೇಲ್ವಿಚಾರಕ ಸಂಜೀವ್ ಹಾಗೂ ಸೇವಾ ಪ್ರತಿನಿಧಿಗಳಾದ ಗೌರಮ್ಮ, ರಾಧಾ, ಸರೋಜಾ, ಮಹಾಲಕ್ಷ್ಮಿ ದೇವಿ, ಅಶ್ವಿನಿ, ಪದ್ಮ, ನೀಲಮ್ಮ, ಪ್ರೀತಿ, ಶ್ರುತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
