ತಹಶೀಲ್ದಾರ್ ಯು ನಾಗರಾಜ ದೀರ್ಘ ರಜೆ ಪ್ರಯುಕ್ತ ವಿಶ್ವನಾಥ್. ಮುರುಡಿಗೆ ಪ್ರಭಾರಿ ಅಧಿಕಾರ…

ಗಂಗಾವತಿ, ಫೆ.13: ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಹಿರಿಯ ನೌಕರ ವಿಶ್ವನಾಥ ಮುರಡಿ ಅವರನ್ನು ಗಂಗಾವತಿಯ ತಹಸೀಲ್ದಾರ್ ಹುದ್ದೆಗೆ ನಿಯೋಜಿಸಿ ಜಿಲ್ಲಾಧಿಕಾರಿ ಬಿ.ಸುರೇಶ ಇಟ್ನಾಳ್ ಆದೇಶ ಮಾಡಿದ್ದಾರೆ.ಗಂಗಾವತಿಯ ಹಾಲಿ ತಹಸೀಲ್ದಾರ್ ಯು ನಾಗರಾಜ್ ಅನಾರೋಗ್ಯದ ಹಿನ್ನೆಲೆಯಲ್ಲಿ ದೀರ್ಘಾವಧಿ ರಜೆ ಹಾಕಿದ್ದು, ಫೆ.12ರಿಂದಲೇ ಜಾರಿಯಾಗುವಂತೆ ವಿಶ್ವನಾಥ ಮುರಡಿಗೆ ಗಂಗಾವತಿ ತಹಸೀಲ್ದಾರ್ ಹುದ್ದೆಯ ಪ್ರಭಾರ ವಹಿಸಲಾಗಿದೆ. ಯು.ನಾಗರಾಜ್, ಫೆ.13ರಿಂದ ಮಾಚ್ 13ರವರೆಗೆ ದೀರ್ಘಾವಧಿ ರಜೆ ಹಾಕಿರುವ ಹಿನ್ನೆಲೆ ಆಡಳಿತಾತ್ಮ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮುರಡಿ ಅವರನ್ನು ಗಂಗಾವತಿಗೆ ಪ್ರಭಾರ ವಹಿಸಲಾಗಿದೆ. ಸದ್ಯಕ್ಕೆ ಮುರಡಿ ಕನಕಗಿರಿಯ ತಹಸೀಲ್ದಾರ್ ಆಗಿದ್ದು, ಹೆಚ್ಚುವರಿಯಾಗಿ ಗಂಗಾವತಿಯ ಜವಾಬ್ದಾರಿ ನೀಡಲಾಗಿದೆ.

