ಪಂಡರಾಪುರ ಪಾದಯಾತ್ರೆಯ ಯಾತ್ರಾತ್ರಿಗಳಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ನಿವಾಸದಲ್ಲಿ ವಿಶೇಷ ಪೂಜೆ…

ಪಂಡರಾಪುರ ಪಾದಯಾತ್ರೆಯ ಯಾತ್ರಾತ್ರಿಗಳಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ನಿವಾಸದಲ್ಲಿ ವಿಶೇಷ ಪೂಜೆ…

ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಅವರ ನಿವಾಸದಲ್ಲಿ ಕಳೆದ 38 ವರ್ಷಗಳಿಂದ ಭದ್ರಾವತಿ ಮತ್ತು ಓಬಳಾಪುರಂ ನಿಂದ ಪಂಡರಾಪುರಕ್ಕೆ ಹೋಗುವ ಪಾದಯಾತ್ರೆಯ ಯಾತ್ರಾತ್ರಿಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಶ್ರೀ ಪಂಡರಾಪುರ ಪಾಂಡುರಂಗನ ಮತ್ತು ರುಕ್ಮಿಣಿ ದೇವಿಯ ಆರಾಧನೆ ಮಾಡಲಾಯಿತು.ಜೊತೆಗೆ ಭಜನೆಯನ್ನು ನೆರವೇರಿಸಿ ಮುಂದೆ ಸಾಗಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರೆಯ ಉಸ್ತುವಾರಿ ಮತ್ತು ಭಜನಾ ಮಂಡಳಿಯ ಉಸ್ತುವಾರಿಗಳಾದ ಚಂದ್ರಶೇಖರ ಗೋಂದಿಮಠ ಭದ್ರಾವತಿ.ಅವರು ಮಾತನಾಡಿ ಪಾದಯಾತ್ರೆಯು ಸ್ವಾಮಿ ನಾಮದೇವಾನಂದ ಭಾರತಿ ಸ್ವಾಮಿಗಳು ಸಾಧಕಾಶ್ರಮ ಗೊಂದಿಮಠ ಅವರ ನೇತೃತ್ವದಲ್ಲಿ ಕಳೆದ 38 ವರ್ಷಗಳಿಂದ ಶ್ರೀ ಪಾಂಡುರಂಗ ಪಂಡರಾಪುರಕ್ಕೆ ಪಾದಯಾತ್ರೆಯನ್ನು ಇಂದಿಗೂ ನಾವು ಮುಂದುವರಿಸಿಕೊಂಡು ಬಂದಿದ್ದೇವೆ ಪಾದಯಾತ್ರೆ ಉದ್ದೇಶ ದುಷ್ಟ ಚಟಗಳಿಂದ ದೂರ ಮಾಡುವುದು.

ಗೋಂದಿಮಠ ಎಂದರೆ ಜೀವನದ ಜಂಜಾಟದಲ್ಲಿ ಜೊತೆಗೆ ಗೊಂದಲವಿಲ್ಲದ ಜೀವನ ನಡೆಸುವುದಕ್ಕೆ ಆಶ್ರಯ ನೀಡುವಂತ ಮಠ ಎಂದು ಹೇಳಿದರು. ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮತ್ತು ಭಜನಾ ಮಂಡಳಿಯ ಸದಸ್ಯರು. ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿಮ್ಮ. ಶ್ರೀಮತಿ ಪದ್ಮಾವತಿ. ಶ್ರೀಮತಿ ರಾಧಿಕಾ.ಮತ್ತು ಸದಸ್ಯರು. ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ ಮತ್ತು ದರೋಜಿ ವೆಂಕಟೇಶ.ಗುರು ಭೀಮ್ ಭಟ್ ಜೋಶಿ. ಭೀಷ್ಮ ನಾರಾಯಣ. ಸೇರಿದಂತೆ ಸಮಾಜದ ಮುಖಂಡರಾದ ಜಿ ಆರ್ ಎಸ್ ಸತ್ಯನಾರಾಯಣ. ಸಂಜಿವ ಕುಮಾರ ರಾಯಚೂರು. ಹೊಸೂರ ಮಂಜುನಾಥ ಶ್ರೇಷ್ಠಿ. ಬಸವರಾಜ.ಪ್ರಶಾಂತ.ಸೇರಿದಂತೆ ಇತರರು ಭಾಗವಹಿಸಿ ಅಧ್ಯಕ್ಷರ ಕುಟುಂಬಸ್ಥರಿಂದ ಲಘುಉಪಹಾರವನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *