ಎಸ್.ಎಸ್. ಆಡಿನ್ ಸೇವಾ ಸಂಸ್ಥೆ ರಾಜ್ಯ ಘಟಕ. ಹೊಳೆ ಆಲೂರು. ಅವರ ವತಿಯಿಂದ ಕೊಡಮಾಡುವ 2025 -26 ನೇ ಸಾಲಿನ ಶಿಕ್ಷಕ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಡಾ. ರಮೇಶ ಸಿದ್ದಪ್ಪ ಭಾಜನರಾಗಿದ್ದಾರೆ..

ಗಂಗಾವತಿ.13ಪ್ರಸ್ತುತ ಪ್ರಶಸ್ತಿ ಪುರಸ್ಕೃತರು ಟಿ ಎಂ ಎ ಶಿಕ್ಷಣ ಮಹಾವಿದ್ಯಾಲಯ ಗಂಗಾವತಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಾ, ಶಿಕ್ಷಕ ವಿದ್ಯಾರ್ಥಿ ಗಳಲ್ಲಿ ವೃತ್ತಿಪರತೆಯನ್ನು ಹಾಗೂ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ, ವಿದ್ಯಾರ್ಥಿಗಳನ್ನು ಅತ್ಯುತ್ತಮವಾಗಿ ಶಿಕ್ಷಕ ವೃತ್ತಿಗೆ ಸಿದ್ಧಪಡಿಸುವಲ್ಲಿ ಹೆಚ್ಚಿನ ಕಾರ್ಯನಿರತರಾಗಿದ್ದು. ನವೀನ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಸ್ಪರ್ಧಾ ಜಗತ್ತಿಗೆ ಸಿದ್ಧಗೊಳಿಸುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .ಪುರಸ್ಕೃತರು ಈಗಾಗಲೇ ತಮ್ಮ ವಿಶೇಷ ಶೈಕ್ಷಣಿಕ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದು. ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಗಾರಗಳಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಈ ಮೂಲಕ ಅವರು ಸಮಾಜದ ಹಾಗೂ ವಿದ್ಯಾರ್ಥಿ ವೃಂದಕ್ಕೆ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡುತ್ತಾ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಶಿಕ್ಷಣ ಕ್ಷೇತ್ರದ ವಿಶೇಷ ವ್ಯಕ್ತಿಗಳ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕರು ತಿಳಿಸಿದ್ದಾರೆ. ಸೆಪ್ಟೆಂಬರ್ 14ರಂದು ಗಜೇಂದ್ರಗಡದ ಅನ್ನದಾನೇಶ್ವರ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುವುದು.
