ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಗೆ ಸನ್ಮಾನ…

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿರುವ ಕರವೇ ಮಹಿಳಾ ನಗರ ಘಟಕದ ಅಧ್ಯಕ್ಷೆ ಹೊನ್ನಳ್ಳಿ ಶ್ರೀದೇವಿಯವರ ನಿವಾಸದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಇವರನ್ನು ಸನ್ಮಾನಿಸಿ ಗೌರವಿಸಿದರು. ನಂತರ ಹೊನ್ನಳ್ಳಿ ಶ್ರೀದೇವಿ ಮಾತನಾಡಿ, ನಾವು ಮಾಡುವ ಕೆಲಸ ದಲ್ಲಿ ಶ್ರದ್ಧೆ ಭಕ್ತಿ, ಪ್ರಾಮಾಣಿಕತೆ ಇದ್ದರೆ ಯಶಸ್ಸು ಸಾಧ್ಯ. ಈ ಜಗತ್ತಿನಲ್ಲಿ ಯಾರು ಯಾರನ್ನು ಗುರುತಿಸುವುದಿಲ್ಲ. ನಮ್ಮ ಪ್ರಯತ್ನ, ಶ್ರಮದಿಂದ ಮಾತ್ರ ಮೇಲೆ ಬರಲು ಸಾಧ್ಯ.. ಜೀವನ ಸಾರ್ಥಕ ಪಡಿಸಿಕೊಳ್ಳಲು ಪರಿಶ್ರಮ ಅಗತ್ಯ ಸಾಧನೆ ಮಾಡಲು ಶರೀರ ಮುಖ್ಯ. ಅದನ್ನು ಸಾರ್ಥಕ ರೀತಿಯಲ್ಲಿ ಬಳಸಬೇಕು. ಅದರ ಮೂಲಕ ಸಮಾಜದಲ್ಲಿ ಆದರ್ಶ ಜೀವನ ನಡೆಸಬೇಕು. ಮಂಜಮ್ಮ ತಾಯಿ ಸಾಧನೆ ಸಮಾಜಕ್ಕೆ ಪ್ರೇರಣೆ ಎಂದು ಹೇಳಿದರು.ಯುವ ಮುಖಂಡ ಸುರೇಶ ಮಾತನಾಡಿ, ಮಂಜಮ್ಮ ತಾಯಿ ಸಾಧನೆ ಇನ್ನಷ್ಟು ಎತ್ತರಕ್ಕ ಬೆಳೆಯಲಿ. ಜಾನಪದ ಕಲೆಯನ್ನು ಉಳಿಸಿ, ಮಂಗಳಮುಖಿಯರ ಜೀವನ ಸಾರ್ಥಕತೆಗೆ ಮಂಜಮ್ಮ ಜೋಗತಿ ಅವರು ಶ್ರಮಿಸುತ್ತಿದ್ದಾರೆ. ಮಂಜಮ್ಮ ಅವರು ಜಾನಪದ ಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಈ ವೇಳೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್
