ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ….

ಗಂಗಾವತಿ.. 12. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲಿಯುಗದ ಕಾಮಧೇನು ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ 354ನೆಯ ಆರಾಧನಾ ಮಹೋತ್ಸವದ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಮಂಗಳವಾರದಂದುಜರಗಿತು ಶ್ರೀಮಠದ ಆವರಣದಿಂದ ಹೊರಟ ರಥೋತ್ಸವ ಶ್ರೀ ನಗರೇಶ್ವರ ದೇವಸ್ಥಾನದವರೆಗೆ ಆಗಮಿಸಿ ಮರಳಿತು. ಈ ಸಂದರ್ಭದಲ್ಲಿ ರಾಜಮಾರ್ಗ ಉದ್ದಕ್ಕೂ ಭಕ್ತರು ಉತ್ತತ್ತಿ ನಾಣ್ಯಗಳನ್ನು ಸಮರ್ಪಿಸಿ ಆರತಿಯನ್ನು ಬೆಳಗಿ ತಮ್ಮ ಭಕ್ತಿ ಭಾವವನ್ನು ವ್ಯಕ್ತಪಡಿಸಿದರು. ರಥೋತ್ಸವದ ರಾಜಮಾರ್ಗದ ಉದ್ದಕ್ಕೂ ವೇದ ಮಂತ್ರ ಘೋಷ. ಭಜನೆ ನೃತ್ಯ ಗಳಿಂದ ಜನರಲ್ಲಿ ಭಕ್ತಿಭಾವ ಮೂಡಿಸುವಲ್ಲಿ ಸಫಲತೆಗೊಂಡಿತು….
