ವಿಕಸಿತ ಕೃಷಿ ಸಂಕಲ್ಪ ಕೇಂದ್ರ ಸರ್ಕಾರದ ಮಹತ್ವ ಯೋಜನೆಗೆ ಚಾಲನೆ…

ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕಿನಲ್ಲಿ ಆಯೋಜಿಸಿದ ಕೃಷಿ ಇಲಾಖೆ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಸಿದ್ದಾಪುರ ಇವರುಗಳನ್ನು ಸಂಯುಕ್ತ ಆಶ್ರಯದಲ್ಲಿ ರೈತರಗಾಗಿ ಆಯೋಜಿಸಿದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಜಶೇಖರಪ್ಪ ಹುಳಿಯಾಪುರ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು . ಮುಖ್ಯ ಅತಿಥಿಗಳಾಗಿ ಹೇ ರಾಘವೇಂದ್ರ ಯೆಲೆಗಾರ ಕೃಷಿ ವಿಜ್ಞಾನ ಮಾತನಾಡಿ ಕೇಂದ್ರ ಸರ್ಕಾರದ ಮಹತ್ವ ಯೋಜನೆ ಆದ ಕೃಷಿ ಸಂಕಲ್ಪ ಅಭಿಯಾನ ರಾಜ್ಯ ಸೇರಿದಂತೆ ದೇಶಾದ್ಯಂತ ಬೆಳೆಸುವುದರ ಮೂಲಕ ರೈತರ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹತ್ತು ಹಲವಾರು ಮಾಹಿತಿಗಳನ್ನು ತಿಳಿ ಹೇಳಲಾಗುವುದು ಮಣ್ಣಿನ ಗುಣಮಟ್ಟ ನೀರಿನ ಪ್ರಮಾಣ ಸಾವಯವ ಗೊಬ್ಬರ ಬಳಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಲಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ಡಾ! ಮನು ಧಾರವಾಡ ಪಂಪನಗೌಡರು ಕಾರಟಗಿ ತಾಲೂಕು ಕೃಷಿ ಮಾರುತಿ ಕೃಷಿ ಇಲಾಖೆ ಮುಖ್ಯ ಅಧಿಕಾರಿಗಳು ಮಲ್ಲಪ್ಪ fpo ಮಾರ್ಗದರ್ಶಿಗಳು ಹನುಮಂತ ಬನ್ನಿಕೊಪ್ಪ ಉಪಾಧ್ಯಕ್ಷರು fpo ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಸೋಮಶೇಖರ್ ನಾಗರಾಜ ವೇದಿಕೆ ಹಾಗೂ ಗ್ರಾಮದ ಎಲ್ಲಾ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
