ಗಂಗಾವತಿ ಅಖಿಲ ಭಾರತ ಮುಷ್ಕರ: ಭಾಗವಾಗಿ ಇಂದು ಗಂಗಾವತಿಯಲ್ಲಿ ಸ್ವಯಂಪ್ರೇರಿತ ಬಂದ್ ಮತ್ತು ಪ್ರತಿಭಟನೆ …

ಗಂಗಾವತಿ ಅಖಿಲ ಭಾರತ ಮುಷ್ಕರ: ಭಾಗವಾಗಿ ಇಂದು ಗಂಗಾವತಿಯಲ್ಲಿ ಸ್ವಯಂಪ್ರೇರಿತ ಬಂದ್ ಮತ್ತು ಪ್ರತಿಭಟನೆ …

ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಫೆಬ್ರವರಿ 12, 2026ರಂದು ಇಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಗಂಗಾವತಿ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು ಕಾರ್ಮಿಕ-ರೈತ-ಕೂಲಿಕಾರ ಅಂಗನವಾಡಿ ಬಿಸಿ ಊಟ ಆಟೋ ಚಾಲಕರು ಲಾರಿ ಚಾಲಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಇಂದು ಗಂಗಾವತಿಯಲ್ಲಿ ಮುಷ್ಕರಕ್ಕೆ ಮತ್ತು ಬೃಹತ್ ಹೋರಾಟವನ್ನು ಮಾಡಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು 4 ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್‌ಗಳು) ತಕ್ಷಣ ಹಿಂಪಡೆಯಬೇಕು. ನರೇಗಾ ಯೋಜನೆಯನ್ನು ವಿ.ಬಿ.ಜಿ-ರಾಮ್-ಜಿ ಮೂಲಕ ದುರ್ಬಲಗೊಳಿಸಿರುವುದನ್ನು ವಿರೋಧಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಿ, ದಿನಕ್ಕೆ ₹600 ಕೂಲಿ ಹಾಗೂ 200 ದಿನಗಳ ಕೆಲಸ ಖಾತ್ರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.ಇದಲ್ಲದೆ ವಿದ್ಯುತ್ ತಿದ್ದುಪಡಿ ಕಾಯ್ದೆ, ವಿಮಾ ಕಾಯ್ದೆ, ಬೀಜ ಕಾಯ್ದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಲೇಬರ್ ಕೋಡ್‌ಗಳಿಗೆ ನಿಯಮಾವಳಿ ರೂಪಿಸದೇ, ಎಲ್ಲಾ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ ₹41,000 ಪರಿಷ್ಕರಣೆ ಜಾರಿಗೊಳಿಸಬೇಕು ಎಂಬ ಬೇಡಿಕೆಯೂ ಮುಂಚೂಣಿಗೆ ತರಲಾಯಿತು.ಖಾಸಗೀಕರಣ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಾಮಾಜಿಕ ಭದ್ರತೆಗಳ ಕಡಿತದಿಂದ ದುಡಿಯುವ ವರ್ಗ ತೀವ್ರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದು, ಈ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಮುಖಂಡರು ಹೇಳಿದರು.

ಕಾರ್ಮಿಕರು-ರೈತರು-ಕೃಷಿ ಕೂಲಿಕಾರರು ಜಂಟಿ ಕಾರ್ಮಿಕರ ಸಂಘಟನೆಗಳು ಸಿಬಿಎಸ್ ಸರ್ಕಲಲ್ಲಿ ಸುಮಾರು ಎರಡು ತಾಸ್ ರಸ್ತಾರೋಕ (ಮಾಡಿ ರಸ್ತೆ ಬಂದ್ ಮಾಡಿ) ಬಂದ್ ಮಾಡುವುದರ ಮೂಲಕ ಹೋರಾಟವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಸಿ ಐ ಟಿ ಯು ನ ರಾಜ್ಯ ಕಾರ್ಯದರ್ಶಿಗಳು ನಿರುಪಾದಿ ಬೆಣಕಲ್ ಸಿ ಐ ಟಿ ಯು ನ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಡಗ್ಗಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹುಸೇನಪ್ಪ ಕೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಗಿರಿಜಮ್ಮ ತಾಲೂಕು ಅಧ್ಯಕ್ಷರಾದ ದುರ್ಗಮ್ಮ ಹೊಸ್ಕೆರ್ ಎಸ್ ಎಫ್ ಐ ತಾಲೂಕು ಅಧ್ಯಕ್ಷರು ನಾಗರಾಜ ಯು ಕಟ್ಟಡ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷರು ಮುತ್ತಣ್ಣಆಟೋ ಚಾಲಕರು ಲಾರಿ ಚಾಲಕರು ಅಂಗನವಾಡಿ ನೌಕರರು ಬಿಸಿಊಟ ನೌಕರರು ಹಮಾಲಿ ಕಾರ್ಮಿಕರು ಕಟ್ಟಡ ಕಾರ್ಮಿಕ ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು

Leave a Reply

Your email address will not be published. Required fields are marked *