ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಗಂಗಾವತಿಯ ಕ್ರೀಡಾಪಟುಗಳ ಆಯ್ಕೆ..

ಗಂಗಾವತಿ :- ಇತ್ತೀಚೆಗೆ ಗಂಗಾವತಿ ತಾಲೂಕು ಒಳಾಂಗಣ ಕ್ರೀಡಾಂಗಣದಲ್ಲಿ, ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ 14 ಹಾಗೂ 17 ವರ್ಷದ ವಯೋಮಿತಿಯ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಕ್ರೀಡಾಕೂಟವನ್ನು ಆಯೋಜಿಸಲಾಯಿತು.
ಈ ಕ್ರೀಡಾಕೂಟದಲ್ಲಿ ಗುಡ್ ಶೇಪರ್ಡ್ ಪ್ರಾಥಮಿಕ ಶಾಲೆ ಮತ್ತು ಬೇತಲ್ ಪ್ರೌಢಶಾಲೆಯ ಕ್ರೀಡಾಪಟುಗಳು ಶ್ರೇಷ್ಠ ಪ್ರದರ್ಶನ ನೀಡಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರ ವಿವರಗಳು:
17 ವರ್ಷದ ವಯೋಮಿತಿ – ಬಾಲಕ ಮತ್ತು ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ತಂಡ : ಪ್ರಥಮ ಸ್ಥಾನ, 17 ವರ್ಷದ ವಯೋಮಿತಿ – ಬಾಲಕ ಮತ್ತು ಬಾಲಕಿಯರ ಟೇಬಲ್ ಟೆನ್ನಿಸ್ ತಂಡ : ಪ್ರಥಮ ಸ್ಥಾನ, 14 ವರ್ಷದ ವಯೋಮಿತಿ – ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ತಂಡ : ಪ್ರಥಮ ಸ್ಥಾನ, 17 ವರ್ಷದ ವಯೋಮಿತಿ – ಬಾಲಕ ಮತ್ತು ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ತಂಡ : ದ್ವಿತೀಯ ಸ್ಥಾನ
ವಿಜೇತರಾದ ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
