ಆಗಸ್ಟ್ 21ರಂದು ಶ್ರೀ ಈರಣ್ಣ ದೇವರ 31ನೇಯ ವರ್ಷದ ಕುಂಭ ಮಹೋತ್ಸವ….

ಆಗಸ್ಟ್ 21ರಂದು ಶ್ರೀ ಈರಣ್ಣ ದೇವರ 31ನೇಯ ವರ್ಷದ ಕುಂಭ ಮಹೋತ್ಸವ….

ಗಂಗಾವತಿ: ಶ್ರೀ ಗಣೇಶ ಶ್ರೀ ಈರಣ್ಣ ಶ್ರೀ ವೀರಭದ್ರೇಶ್ವರ ಮೂರ್ತಿಗಳ 9ನೇ ವರ್ಷದ ಪ್ರತಿಷ್ಠಾಪನ ಹಾಗೂ ಶ್ರೀ ಈರಣ್ಣ ದೇವರ 31ನೇಯ ವರ್ಷದ 108 ಮಹಾ ಕುಂಭ ಮಹೋತ್ಸವ ಆಗಸ್ಟ್ 21ರಂದು ಗುರುವಾರ ಜರುಗಲಿದೆ ಎಂದು ಶ್ರೀ ಈರಣ್ಣ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಓಲಿ ಶರಣಪ್ಪ ಪಂಪಾಪತಿ ಸಿಂಗನಾಳ. ಅಕ್ಕಿ ಕೊಟ್ರಪ್ಪ ಶೇಖರಪ್ಪ ಮಸ್ಕಿ ಮಂಜುನಾಥ ಈಡಿಗರ. ಈರಣ್ಣ ಮಹಾಂತೇಶ ಸೇರಿದಂತೆ ಇತರರು ಹೇಳಿದರು.

ಅವರು ಸೋಮವಾರದಂದು ದೇವಸ್ಥಾನದ ಆವರಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ಮಹಾ ಕುಂಬೋತ್ಸವದ ಪ್ರಯುಕ್ತ ದಿನಾಂಕ 25 ಜುಲೈನಿಂದ ಆಗಸ್ಟ್ 24ರ ವರೆಗೆ ಶ್ರೀ ಈರಣ್ಣ ದೇವರಿಗೆ ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ ಹಾಗೂ ಶ್ರೀ ಚನ್ನಬಸವ ಸ್ವಾಮಿ ಭಜನೆಯ ಮಂಗಳೋತ್ತ್ಸವದ ಅಂಗವಾಗಿ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ ಮಠ. ಶ್ರೀ ವೇದಮೂರ್ತಿ ಶ್ರೀ ಭುವನೇಶ್ವರ ತಾತನವರು ಸುಳೆಕಲ್ ವೇದಮೂರ್ತಿ ಶ್ರೀ ಗವಿಸಿದ್ದಯ್ಯ ತಾತನವರು ಅರಳಿಹಳ್ಳಿ ಇವರ ದಿವ್ಯ ಸಾನಿಧ್ಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಗಂಗಾಧರ ಸಹಯೋಗದೊಂದಿಗೆ ಆಗಸ್ಟ್ 21ರಂದು ಶ್ರೀ ಈರಣ್ಣ ದೇವರಿಗೆ ಕುಂಭಾಭಿಷೇಕ ವೇದಮೂರ್ತಿ ರೇವಣಸಿದ್ದಯ್ಯ ತಾತನವರು ನೆರವೇರಿಸುವರು.ಇದಕ್ಕೂ ಮುಂಚೆ ಕುಂಭ ಮೆರವಣಿಗೆಯನ್ನು ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವದೊಂದಿಗೆ ಖಡ್ಗ ಮೇಳ ವೀರಗಾಸೆ ಪುರವಂತಿಕೆಯನ್ನು ಗಂಗೆ ಪೋಜಿನೊಂದಿಗೆ ಆರಂಭಿಸಿ ವಾಸು ಕೊಳಗದ.ಸಮಗಂಡಿ ಲಿಂಗಪ್ಪ.ಹಾಗೂ ಪರವಿ ನಾಗರಾಜ ಇವರ ನೇತೃತ್ವದಲ್ಲಿ ಜರುಗಳಿದ್ದು ಶಸ್ತ್ರಧಾರ ನಡೆಸಲಾಗುವುದು ಎಂದು ತಿಳಿಸಿದ ಸಮಿತಿಯ ಮುಖಂಡರುಗಳು ಕುಂಭಾಭಿಷೇಕದ ಬಳಿಕ 12:30 ಕ್ಕೆ ಗಣರಾಧನೆ ಮಹಾ ಅನ್ನಸಂತರ್ಪಣೆ ಜರಗಳಿದ್ದು ಸಕಲ ಭಕ್ತಾದಿಗಳು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮದ ಯಶಸ್ವಿಗೆ ಹಾಗೂ ಶ್ರೀ ಈರಣ್ಣ ದೇವರು ಸೇರಿದಂತೆ ಪರಿವಾರ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *