ಕನ್ನಡ ಭಾಷೆಗೆ ಆದ್ಯತೆ ನೀಡಿ : ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ…

ಕನ್ನಡ ಭಾಷೆಗೆ ಆದ್ಯತೆ ನೀಡಿ : ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ…

ಕಂಪ್ಲಿ: ಕನ್ನಡ ಭಾಷೆಗೆ ಆದ್ಯತೆ ನೀಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡಿಗರೆಲ್ಲರೂ ಮಾಡಲು ಮುಂದಾಗಬೇಕು ಎಂದು ಕರವೇ(ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಅತಿಥಿ ಗೃಹದಲ್ಲಿ ಸಂಘಟನಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕನ್ನಡ ಭಾಷೆಯ ಇತಿಹಾಸ ಅರಿಯುವ ಮೂಲಕ ಕನ್ನಡತನ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಿದೆ’. ನಮ್ಮ ಕನ್ನಡ ನಾಡು-ನುಡಿ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡು ಶ್ರೀಮಂತವಾಗಿದೆ, ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರಾಗಬೇಕು. ನಾಮಫಲಕದಲ್ಲಿ ಕಡ್ಡಯವಾಗಿ ಕನ್ನಡ ಬಳಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಅನ್ಯ ಭಾಷೆಯ ನಾಮಫಲಕಗಳಿಗೆ ಕಪ್ಪುಮಸಿ ಬಡಿಯಲಾಗುವುದು. ಕನ್ಮಡಕ್ಕೆ ಆಧ್ಯತೆ ನೀಡದವರ ಅಂಗಡಿಗಳ ಪರವಾನಿಗೆ ರದ್ದುಪಡಿಸಬೇಕೆಂದರು.ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಜಂಗ ನಾಗರಾಜ, ಉಪಾಧ್ಯಕ್ಷ ಗಣೇಶ, ತಾಲೂಕು ಯುವ ಘಟಕ ಅಧ್ಯಕ್ಷ ಪುಟ್ಟಿ ರಾಘವೇಂದ್ರ, ಯುವ ನಗರ ಘಟಕ ಅಧ್ಯಕ್ಷ ಎಂ.ರಂಜಿತ್ ಕುಮಾರ, ತಾಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷ ಎಂ.ಶಾಷಾವಲಿ(ಮುನ್ನಾ), ಲಿಂಗೇಶ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆಯ್ಕೆ : ಕರವೇ ರಾಜ್ಯ ಉಪಾಧ್ಯಕ್ಷ ಶೇಖರ, ಜಿಲ್ಲಾಧ್ಯಕ್ಷ ಅಂಗಡಿ ಶಂಕರ್ ಅವರ ನಿರ್ದೇಶನದ ಮೇರೆಗೆ ಕಂಪ್ಲಿ ತಾಲೂಕು ಘಟಕ ಹಾಗೂ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುತಮದಿಂದ ಆಯ್ಕೆ ಮಾಡಿ, ಆದೇಶ ಪ್ರತಿ ನೀಡಲಾಯಿತು. ತಾಲೂಕು ಗೌರವಾಧ್ಯಕ್ಷರಾಗಿ ಮೇದರ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್‌ಗೌಡ, ಸಂಚಾಲಕರಾಗಿ ಎ.ಯಂಕಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಅವಿನಾಶ, ವಾಣಿಜ್ಯ ಘಟಕ ಅಧ್ಯಕ್ಷರಾಗಿ ಸಾಬಣ್ಣ ಮೇಟಿ, ಉಪಾಧ್ಯಕ್ಷರಾಗಿ ಕೆ.ವಿರುಪಣ್ಣ, ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆರ್.ಪಿ.ಶಶಿಕುಮಾರ, ನಗರ ಘಟಕ ಗೌರವಾಧ್ಯಕ್ಷರಾಗಿ ಕೆ.ಮಲ್ಲಿಕಾರ್ಜುನ, ಸಣಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ಕನಕಗಿರಿ ಶಶಿಧರ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ, ಬೆಳಗೋಡ್‌ಹಾಳ್ ಗ್ರಾಮ ಘಟಕ ಅಧ್ಯಕ್ಷರಾಗಿ ವಾಸು, ದೇವಲಾಪುರ ಗ್ರಾಮ ಘಟಕ ಅಧ್ಯಕ್ಷರಾಗಿ ಬೂದಾಳ್ ರವಿ, ಮೆಟ್ರಿ ಅಧ್ಯಕ್ಷರಾಗಿ ಕೆರೆಕೆರೆ ದೊಡ್ಡಪ್ಪ, ಮಹಿಳಾ ನಗರ ಘಟಕ ಅಧ್ಯಕ್ಷೆಯಾಗಿ ಹೊನ್ನಳ್ಳಿ ಶ್ರೀದೇವಿ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ವಿಜಯಲಕ್ಷ್ಮಿ, ವಿದ್ಯಾರ್ಥಿ ನಗರ ಘಟಕ ಅಧ್ಯಕ್ಷರಾಗಿ ಪ್ರಕಾಶ್ ಆಯ್ಕೆಗೊಂಡರು. ಫೋಟೋ 02 : ಕಂಪ್ಲಿಯಲ್ಲಿ ನಡೆದ ಆಯ್ಕೆ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *