ಅಭದ್ರತೆಯಲ್ಲಿ ಗ್ರಾಮ ಪಂಚಾಯತ್ ನಿವೃತ್ತ ನೌಕರರು. ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯ….

ಅಭದ್ರತೆಯಲ್ಲಿ ಗ್ರಾಮ ಪಂಚಾಯತ್ ನಿವೃತ್ತ ನೌಕರರು. ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯ….

ಗಂಗಾವತಿ.. ಕಳೆದ 25 ಹಾಗೂ 30 ವರ್ಷಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್ ಹಾಗೂ ಭರ್ತಿ ಪಡೆದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ನಿವೃತ್ತ ನೌಕರರಿಗೆ.ರಾಜ್ಯ ಸರ್ಕಾರ ಪಿಂಚಣಿ ಸೌಲಭ್ಯವನ್ನು ಕಲ್ಪಿಸಬೇಕೆಂದು ನಿವೃತ್ತ ನೌಕರರಾದ ಬಿ ವಿರುಪಣ್ಣ ಡಾ ನಾಪುರ್. ಮಲ್ಲಪ್ಪ ಕುಂಬಾರ್ ಸಿರುಗುಪ್ಪ ಎಂ ವಿರುಪಣ್ಣ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ.. 1987ರಿಂದ ಗ್ರಾಮ ಪಂಚಾಯಿತಿಗೆ ನೌಕರರಾಗಿ ಸೇವೆ ಸಲ್ಲಿಸಿದ ರಾಜ್ಯದ 2000ಕ್ಕೂ ಅಧಿಕ ನೌಕರರು ಈಗ ಪಿಂಚಣಿ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತರಾಗಿದ್ದು. ಕೆ ಸಿ ಎಸ್ ನಿಯಮ 235ರ ಪ್ರಕಾರ ಪಿಂಚಿನಿ ಸೌಲಭ್ಯ. ಕಲ್ಪಿಸಿದಲ್ಲಿ ಕಳೆದ 31 40 ವರ್ಷ ದುಡಿದವರಿಗೆ ಕೂಲಿ ಕೊಟ್ಟಂತೆ ಆಗುತ್ತದೆ ಮತ್ತು ನಿವೃತ್ತರ ಮುಂದಿನ ಜೀವನಕ್ಕೆ ಭದ್ರಬುನಾದಿ ಹಾಕಿದಂತಾಗುತ್ತದೆ ಎಂದು ತಿಳಿಸಿದ ಅವರುಗಳು ಪ್ರಸ್ತುತ ಈಗ ನೀಡುತ್ತಿರುವ ನೃತ್ಯ ವೇತನ ವಾರ್ಷಿಕ ಲೆಕ್ಕಾಚಾರದಲ್ಲಿ 25,000 ದಿಂದ 30000 ಒಳಗೆ ಬರುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳನ್ನು ನಡೆಸಿ ಕೆಇಟಿ ಮೊರೆ ಹೋದರು ಅಲ್ಲಿ ನ್ಯಾಯ ಸಮ್ಮತವಾದ ನಿವೃತ್ತಿ ವೇತನ ( ಪಿಂಚಣಿ ) ನೀಡಬೇಕೆಂದು ಆದೇಶ ಮಾಡಿದರೂ ಸಹ ಸರ್ಕಾರ ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತದೆ. 2016ರ ಬಳಿಕ ಪಿಂಚಣಿ ಸೌಲಭ್ಯ ಕೊಡಲು ಬರುವುದಿಲ್ಲ ಎಂಬ ಸರ್ಕಾರದ ನಿಯಮ ಕಾನೂನು ಬಾಹಿರವಾಗಿದೆ ಜೊತೆಗೆ ಅ ವೈಜ್ಞಾನಿಕತೆಯಿಂದ ಕೂಡಿದೆ ಎಂದು ಸಮಗ್ರ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *