ಇಂದರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ರಚನೆ,,

ಇಂದರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ರಚನೆ,,

ಗಂಗಾವತಿ :10 ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇಂದರಗಿ ಸರಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ನೂತನವಾಗಿ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ರಚನೆಮಾಡಲಾಯಿತು.ಎಸ್ ಡಿಎಂಸಿ ನೂತನ ಆಧ್ಯಕ್ಷರಾಗಿ ಡಾ.ಅಮರೇಶ ಕುಂಬಾರ, ಉಪಾಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ಇಂದ್ರೇಶ ಕೇರಳಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಂತರದಲ್ಲಿ ಡಾ.ಅಮರೇಶ ಕುಂಬಾರ ಮಾತನಾಡಿ ಎಸ್ ಡಿಎಂಸಿ ಹುದ್ದೆ ಇದು ಗುರುತರ ಜವಾಬ್ದಾರಿಯ ಕೆಲಸವಾಗಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಜೊತೆಗೆ ಶಾಲೆಗೆ ಅವಶ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಪ್ರಾಶಸ್ಥ್ಯ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವರದಮ್ಮ ನಿಂಗಪ್ಪ ಎಮ್ಮಿ, ಉಪಾಧ್ಯಕ್ಷ ಅಮರೇಶ ಕೊಪ್ಪಳ ಗ್ರಾ.ಪಂ ಸದಸ್ಯರಾದ ಗವಿಸಿದ್ದಪ್ಪ ಹಾವರಗಿ, ದೇವಪ್ಪ ಭೋವಿ,ಡಾ.ನಾಗರಾಜ ಕಂಬಳಿ,ಹನುಮಂತ ಕಾಟ್ನಕ್ಕಿ, ಇಂದ್ರೇಶ ಕೊಳ್ಳಿ, ಗ್ರಾಮದ ಮುಖಂಡರಾದ ಹುಚ್ಚಪ್ಪ ಹಿರೇಕುರಬರ,ಶಿವಣ್ಣ ಭೀಮನೂರು, ಗಾಳೇಪ್ಪ ಹರಿಜನ,ಮಂಜುನಾಥ ದೋಟಿಹಾಳ, ಸಿದ್ದನಗೌಡ ವಣಗೇರಿ,ಫಕೀರಪ್ಪ ಬೆಟ್ಟಗೇರಿ, ಶಿಕ್ಷಣ ಪ್ರೇಮಿಗಳು ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *