ಹಡಪದ ಅಪ್ಪಣ್ಣ ಅವರ ದಾರಿಯಲ್ಲಿ ಎಲ್ಲರೂ ನಡೆಯೋಣ ನಾಗರಾಜ ವಿಶ್ವಕರ್ಮಮುದಗಲ್.

ಗಂಗಾವತಿ ಜು.೧೦: ಸಮಾಜದಲ್ಲಿ ಪ್ರತಿ ಒಬ್ಬರು ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಳಿತು ಮಾಡಬೇಕು. ಶಿವಶರಣ ಹಡಪದ ಅಪ್ಪಣ್ಣ ಅವರ ಹಾಗೆ ಉತ್ತಮ ಚಿಂತನೆ, ಆಲೋಚನೆ, ತತ್ವ ಬೋಧನೆ, ನಡೆ ನುಡಿಗಳನ್ನು ನಮ್ಮ ಜೀವನದ್ದಕ್ಕೂ ಅಳವಡಿಸಿಕೊಂಡು ನಡೆಯಬೇಕು ಎಂದು ಕಾವ್ಯ ಶ್ರೀ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ನಾಗರಾಜ ವಿಶ್ವ ಕರ್ಮ ಹೇಳಿದರು.ಮದಗಲ್ ಸಮೀಪದ ನಾಗಲಾಪೂರು ಕಾವ್ಯಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಲೆಕ್ಕಿಹಾಳ ವಹಿಸಿದರು.ಸಮಾಜ ಸೇವೆಗೆ ಎಲ್ಲರೂ ಮುಂದಾಗಬೇಕು. ಹಡಪದ ಅಪ್ಪಣ್ಣ ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವುದು ಅವಶ್ಯಕವಾಗಿದೆ. ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವರಾಜ ಲೆಕ್ಕಿಹಾಳ,ಪ್ರೇಮ ಭೋವಿ, ಹನುಮೇಶ, ಯಲ್ಲು ಬಾಯಿ,ಹಾಗೂ ವಿಧ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.