ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹರಿದುಬಂತು ಜನಸಾಗರ. …

ಗಂಗಾವತಿ ನಗರದ ಆನೆಗುಂದಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಗುರುವಾರ ದಿನವಾದ ಇಂದು ಗುರು ಪೌರ್ಣಮಿ ಆಚರಣೆ ಪ್ರಯುಕ್ತ ನಗರ ಸೇರಿದಂತೆ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆ ಭಕ್ತಾದಿಗಳು ಶ್ರೀ ಸಾಯಿಬಾಬಾ ದರ್ಶನ ಪಡೆದು ಪುನೀತರಾದರು. ಬೆಳಿಗ್ಗೆ ಎಂದಿನಂತೆ ಕಾಕಡ ಆರತಿಯೊಂದಿಗೆ ವೈವಿಧ್ಯಮಯ ಪೂಜಾ ಕಾರ್ಯಕ್ರಮಗಳನ್ನು ವೆಂಕಟೇಶ್ ಜೋಶಿ ನವಿಸಿಕೊಟ್ಟರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ ರಾಮಕೃಷ್ಣ ಮಾತನಾಡಿ ಕಳೆದ ವರ್ಷಕ್ಕಿಂತ ಈ ವರ್ಷ 25ನೇ ವಾರ್ಷಿಕೋತ್ಸವ ಶುಭ ಸಂದರ್ಭದಲ್ಲಿ 8000ಕ್ಕೂ ಅಧಿಕ ಭಕ್ತಾದಿಗಳು ದರ್ಶನ್ ಪಡಿದು ಪ್ರಸಾದ ಸ್ವೀಕರಿಸಿದ್ದು ಸಂತಸದಾಯಕವಾಗಿದೆ ಸಬ್ ಕಾ ಮಾಲಿಕ್ ಏಕ್ ಹಾಯ್ ಎಂಬ ದಿವ್ಯ ಸಂದೇಶವನ್ನು ನೀಡಿದ ಶ್ರೀ ಶಿರಡಿ ಸಾಯಿಬಾಬಾ ಅವರು ಯಾವುದೇ ಜಾತಿ ಮತ ಭೇದವಿಲ್ಲದೆ ಸರ್ವ ಜನಾಂಗದ ಆರಾಧ್ಯ ದೈವರಾಗಿದ್ದಾರೆ. ಬಾಬಾ ಅವರ ಸ್ಮರಣೆಯಿಂದ ಸಂಕಷ್ಟಗಳು ದೂರವಾಗುವುದೆಂದು ಹೇಳಿದರು. ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು ಇವರ ಸಂಘಟನೆಗಳ ಪದಾಧಿಕಾರಿಗಳು ವಿದ್ಯಾರ್ಥಿಗಳು ರೈತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಟ್ರಸ್ಟಿ ಸದಸ್ಯರುಗಳಾದ ಗಾಳಿ ಶಿವಪ್ಪ ಚೇತನ್ ಹಿರೇಮಠ್. ತಾಯಪ್ಪ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.