ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿ / ಕುರುಗೋಡು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ತಾಲೂಕು ಪಂಚಾಯತ್, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಪುರಸಭೆ ಆಡಳಿತ ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು, ಆಯುಷ್ಮಾನ್ ಆರೋಗ್ಯ ಮಂದಿರೆ ಯಲ್ಲಾಪುರ ಗ್ರಾಮಪಂಚಾಯತ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯದ ನಡಿಗೆ ಜನರ ಬಳಿಗೆ ಎಂಬ ಧ್ಯೇಯ ವಾಕ್ಯದೊಂದಿಗೆಆರೋಗ್ಯ ತಪಾಸಣೆ ಶಿಬಿರವನ್ನು ಕುರುಗೋಡು ಬಿ ವ್ಯಾಪ್ತಿಯ ಯಲ್ಲಾಪುರ ಉಪಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುನಾಥ ಜವಳಿ ಉದ್ಘಾಟಿಸಿ ಮಾತನಾಡಿ ಸಾಂಕ್ರಾಮಿಕ ರೋಗಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಗಳಾಗಿವೆ. ಇವುಗಳನ್ನು ಸೋಂಕು ರೋಗಗಳು ಎಂದೂ ಕರೆಯಲಾಗುತ್ತದೆ.ಅಸಾಂಕ್ರಾಮಿಕ ರೋಗಗಳು. ವ್ಯಕ್ತಿಯಿಂದ ವ್ಯಕ್ತಿಗೆ ಹರಡದ ದೀರ್ಘಕಾಲದ ಕಾಯಿಲೆಗಳು ಇವು ಜೀವನಶೈಲಿ ಮತ್ತು ತಳಿಶಾಸ್ತ್ರದಿಂದ ಉಂಟಾಗುತ್ತವೆ. ಸಾಂಕ್ರಾಮಿಕ ರೋಗಗಳು, ಬ್ಯಾಕ್ಟೀರಿಯಾ, ವೈರಸ್ ಮೂಲಕ ಹರಡುತ್ತವೆ. ಜೀವನಶೈಲಿ ಬದಲಾವಣೆ ಮತ್ತು ಸ್ವಚ್ಛತೆ ಮುಖ್ಯವಾಗಿದೆ. ಅಸಾಂಕ್ರಾಮಿಕ ರೋಗಗಳು ಇವುಗಳ ತಡೆಗಟ್ಟುವಿಕೆ ಬಗ್ಗೆ ತಿಳಿಸಿದರು.ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 91ಕ್ಕೂ ಹೆಚ್ಚಿನ ಹದಿಹರೆಯದವರಿಗೆ, ಗರ್ಭಿಣಿಯರಿಗೆ, ಚಿಕ್ಕ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯರಿಗೆ, ವೃದ್ಧರಿಗೆ ಆರೋಗ್ಯ ತಪಾಸಣೆ ಕೈಗೊಂಡು ಔಷಧಿಗಳನ್ನು ವಿತರಿಸಲಾಯಿತು.ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿಗಳಾದ ಡಾ. ಸುನಿಲ್,ನೇತ್ರಾಧಿಕಾರಿ ಜಿ.ಪಲ್ಲವಿ. ಅರೋಗ್ಯ ಇಲಾಖೆಯ PHCO ಸುನೀತಾ ಡಿ, ಸುಭಾನ್ ಕೆ, ಶ್ರೀಮತಿ ನೇತ್ರಾವತಿ, ಶೇಖರ್ ಹೆಚ್.ಬಸವರಾಜ್, ಗಣೇಶ್, ಅನಂತ್ ಕುಮಾರ್ ಸೇರಿದಂತೆಆಶಾ ಕಾರ್ಯಕರ್ತರು,ವಾರ್ಡ್ ನ ಸದಸ್ಯರು, ಊರಿನ ಹಿರಿಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
