ಬೇಜವಾಬ್ದಾರಿ ವಾರ್ಡನ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹಾಸ್ಟೆಲ್ ಅವ್ಯವಸ್ಥೆ ಸರಿ ಮಾಡಲು ಹುಲಗಪ್ಪ ಕೊಜ್ಜಿ ಆಗ್ರಹ…

ಬೇಜವಾಬ್ದಾರಿ ವಾರ್ಡನ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹಾಸ್ಟೆಲ್ ಅವ್ಯವಸ್ಥೆ ಸರಿ ಮಾಡಲು ಹುಲಗಪ್ಪ ಕೊಜ್ಜಿ ಆಗ್ರಹ…

ಬೇಜವಾಬ್ದಾರಿ ವಾರ್ಡನ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹಾಸ್ಟೆಲ್ ಅವ್ಯವಸ್ಥೆ ಸರಿ ಮಾಡಲು ಹುಲಗಪ್ಪ ಕೊಜ್ಜಿ ಆಗ್ರಹ… ಗಂಗಾವತಿ ನಗರದ ಸಾಯಿನಗರದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿನ್ ನಂತರದ ಬಾಲಕರ ವಸತಿ ನಿಯಲದಲ್ಲಿ ಬಾತ್ ರೂಮ್, ಕಿಚನ್, ಗಲೀಜಿನಿಂದ ಕೂಡಿದ್ದು ಸದರಿ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳು ವಕುರಿತು ಮನವಿ.ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ, ಹುಲಗಪ್ಪ ಕೊಜ್ಜಿ ವಿಭಾಗೀಯ ಕಾರ್ಯದರ್ಶಿಗಳು, ಭಾರತೀಯ ಪ್ರಜಾ ಸೇನೆ. (ಅಂಬೇಡ್ಕರ ವಾದ) (ರಿ) ಇದ್ದು, ತಮಗೆ ದೂರು ಸಲ್ಲಿಸುವುದೇನೆಂದರೆ,ಗಂಗಾವತಿ ನಗರದ ಸಾಯಿನಗರದಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿನ್ ನಂತರದ ಬಾಲಕರ ವಸತಿ ನಿಲಯ ಇದ್ದು, ಸದರಿ ವಸತಿ ನಿಲಯದಲ್ಲಿ ಬಾತ್ ರೂಮ್, ಕಿಚನ್ ಇನ್ನಿತರೇ ರೂಮುಗಳು ಸ್ವಚ್ಛತೆಯಿಂದ ಕೂಡಿದ್ದರೆ ಅಲ್ಲಿನ ವಿದ್ಯಾರ್ಥಿಗಳು ಆರೋಗ್ಯವಾಗಿ ಇರುತ್ತಾರೆ. ಆದರೆ ಸದರಿ ವಸತಿ ನಿಲಯದಲ್ಲಿ ಬಾತ್ ರೂಮ್ ಕೊಳೆತು ನಾರುತ್ತಿದೆ. ಮತ್ತು ನೀರಿನ ಪೈಪುಗಳು ಲೀಕೇಜ್ ಆಗಿ ಬಾತ್ ರೂಮ್ ಹತ್ತಿರ ನೀರು ನಿಂದಿವೆ ಇದರಿಂದ ಅಲ್ಲಿ ಪಾಚಿ ಬೆಳೆದು ವಿದ್ಯಾರ್ಥಿಗಳು ಸ್ಥಾನಕ್ಕೆ ಹೋದಾಗ ಕಾಲು ಜಾರಿ ಬಿದ್ದು ಕೈಕಾಲುಗಳನ್ನು ಮುರಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

ಮತ್ತು ನೀರು ನಿಲ್ಲುವುದರಿಂದ ಅಲ್ಲಿ ಗಲೀಜು ವಾತಾವರಣ ಸೃಷ್ಟಿಯಾಗಿ ಸೊಳ್ಳೆ ಇನ್ನಿತರ ಕ್ರಿಮಿಗಳು ಬಂದು ವಿದ್ಯಾರ್ಥಿಗಳಿಗೆ ಸೊಳ್ಳೆಗಳು ಕಡಿತದಿಂದ ಡೆಂಗ್ಯೂ ಇನ್ನಿತರ ರೋಗಕ್ಕೆ ತುತ್ತಾಗುತ್ತಾರೆ. ಹಾಗೂ ಕಿಚನ್‌ ರೂಮ್ ಇದ್ದು ಇಲ್ಲಿಯು ಸಹ ಗಬ್ಬು ನಾರುತ್ತಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಾಕ್ರಾಮಿಕ ರೋಗಗಳು ಹರಡುವ ಸಾದ್ಯತೆಗಳು ಇರುತ್ತವೆ. ಹಾಗೂ ಸದರಿ ವಿದ್ಯಾರ್ತಿಗಳಿಗೆ ಊಟ ಸಹ ಸರಿಯಾಗಿ ಇರುವುದಿಲ್ಲ. ಆದ್ದರಿಂದ ಹಾಸ್ಟೇಲ್ ವಾರ್ಡನ್ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಕಂಡು ಬರುತ್ತದೆ. ಆದ್ದರಿಂದ ವಾರ್ಡನ್ ಮೇಲೆ ಸೂಕ್ತ ಕ್ರಮ ಕೈಗೊಂಡು ಬಾತ್ ರೂಮ್ ಮತ್ತು ಕಿಚನ್ ದುರಸ್ಥಿ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ.ಹುಲುಗಪ್ಪ ಕೊಜ್ಜಿ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಭಾರತೀಯ ಪ್ರಜಾ ಸೇನೆ. ಅಂಬೇಡ್ಕರವಾದ.

Leave a Reply

Your email address will not be published. Required fields are marked *