ಮರಳಿ ಗ್ರಾಮದಲ್ಲಿ ಹಜರತ್ ಹೊನ್ನೂರು ವಲಿ ಅವರ 114ನೇ ಉರುಸು: ಸರ್ವಧರ್ಮ ಭಕ್ತರ ಸಂಗಮದಲ್ಲಿ ಭಕ್ತಿಭಾವದ ಮಹೋತ್ಸವ…

ಮರಳಿ ಗ್ರಾಮದಲ್ಲಿ ಹಜರತ್ ಹೊನ್ನೂರು ವಲಿ ಅವರ 114ನೇ ಉರುಸು: ಸರ್ವಧರ್ಮ ಭಕ್ತರ ಸಂಗಮದಲ್ಲಿ ಭಕ್ತಿಭಾವದ ಮಹೋತ್ಸವ…

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಶ್ರೀ ಶ್ರೀ ಪರಮಪೂಜ್ಯ ಹಜರತ್ ಹೊನ್ನೂರು ವಲಿ ಅವರ 114ನೇ ವರ್ಷದ ಉರುಸು ಮಹೋತ್ಸವವು ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನೆರವೇರಿತು. ಈ ಪವಿತ್ರ ಉರುಸು ಕಾರ್ಯಕ್ರಮವು ಗ್ರಾಮದಲ್ಲಿನ ದರ್ಗಾ ಪ್ರಾಂಗಣದಲ್ಲಿ ನಡೆಯಿದ್ದು, ಮರಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಹಜರತ್ ಹೊನ್ನೂರು ವಲಿ ಅವರ ದರ್ಶನ ಪಡೆದು ಆಶೀರ್ವಾದ ಪಡೆದರು.ಉರುಸು ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಗಳು, ಕುರಾನ್ ಪಠಣ, ಧಾರ್ಮಿಕ ಉಪನ್ಯಾಸಗಳು ಹಾಗೂ ದರ್ಗಾದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು. ಭಕ್ತರು ಚಾದರ್ ಸಮರ್ಪಣೆ ಮಾಡಿ ತಮ್ಮ ಮನೋಭಿಲಾಷೆಗಳನ್ನು ಸಲ್ಲಿಸಿದರು. ಧರ್ಮ, ಜಾತಿ ಬೇಧವಿಲ್ಲದೆ ಹಿಂದೂ, ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಸೌಹಾರ್ದತೆಯ ಸಂದೇಶ ಸಾರಿದರು.

ಈ ಉರುಸು ಮಹೋತ್ಸವದಲ್ಲಿ ಸಣ್ಣ ಹೂನ್ನೂರಸಾಬ, ರಂಜಾನಸಾಬ, ಮೌಲಸಾಬ ಡಿ., ಹೂನ್ನೂರಸಾಬ, ಪೀರಸಾಬ, ಕಾಶಿಂಸಾಬ, ಸಂಕ್ರಸಾಬ, ಹೂನ್ನೂರಸಾಬ ಟಿ., ಫಕೀರಪ್ಪ ನಾಯಕ, ಯಮನೂರಪ್ಪ ಕರುರೂ, ಯಮನೂರಸಾಬ, ವಸಂತಕುಮಾರ, ರಮೇಶ್ ನಾಯಕ, ಹೂನ್ನೂರಸ್ವಾಮಿ ಮರಳಿ, ಮಾರಪ್ಪ ಗಂಗಾಮತ, ರಾಜಾವಲಿ, ನಾಗರಾಜ ಉಪ್ಪಾರ, ಶ್ರೀಕಾಂತ್ ಹಿರೇಮಠ, ಯಮನೂರಪ್ಪ ಮೂಲಿಮನಿ, ಜಿ. ಪಂಪಾಪತಿ, ಕೆ. ಮೌಲಸಾಬ, ವೆಂಕಟೇಶ್ ದಿನಸಮುದ್ರ, ಕಾಜಾಸಾಬ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.ಉರುಸು ಸಂದರ್ಭದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕೂಡ ಏರ್ಪಡಿಸಲಾಗಿತ್ತು. ಭಕ್ತರು ದಿನವಿಡೀ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಸಂತೃಪ್ತಿ ಹೊಂದಿದರು. ಈ ಮಹೋತ್ಸವವು ಸರ್ವಧರ್ಮ ಸೌಹಾರ್ದತೆಯ ಪ್ರತೀಕವಾಗಿದ್ದು, ಗ್ರಾಮದಲ್ಲಿ ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಸಾರಿತು.ಈ ಕಾರ್ಯಕ್ರಮದ ಯಶಸ್ಸಿಗೆ ಗ್ರಾಮಸ್ಥರು ಹಾಗೂ ದರ್ಗಾ ಸಮಿತಿಯ ಸದಸ್ಯರು ವಿಶೇಷ ಶ್ರಮವಹಿಸಿದ್ದರು. ಭಕ್ತರ ಸಹಕಾರದಿಂದ ಉರುಸು ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

Leave a Reply

Your email address will not be published. Required fields are marked *