ಕ.ರ.ವೇ ನಗರ ಘಟಕ ಅಧ್ಯಕ್ಷರಾಗಿ ರಮೇಶ ನಾಯಕ ನೇಮಕ..

ಕ.ರ.ವೇ ನಗರ ಘಟಕ ಅಧ್ಯಕ್ಷರಾಗಿ ರಮೇಶ ನಾಯಕ ನೇಮಕ..

ಗಂಗಾವತಿ: ನಗರದ ಸರ್ಕಿಟ್ ಹೌಸ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಬಣ) ತಾಲೂಕು ಅಧ್ಯಕ್ಷ ಹೆಚ್.ಮಂಜುನಾಥ ಆನೆಗೊಂದಿ ಹಾಗೂ ಜಿಲ್ಲಾ ಕಾರ್ಯಕಾರಿ ಸದಸ್ಯ ಚಂದ್ರಶೇಖರ ಶೆಟ್ಟಿ, ಗೌರವ ಅಧ್ಯಕ್ಷರಾದ ಬಸವರಾಜ ಮಾಂತಗೊಂಡ ಇವರ ನೇತೃತ್ವದಲ್ಲಿ ಸಂಘಟನಾತ್ಮಕವಾಗಿ ಶ್ರಮಿಸುವುದನ್ನು ಗೌರವಿಸಿ, ಜನಪರ ಮತ್ತು ಕನ್ನಡ ಪರ ಹಾಗೂ ಸಮಾಜಮುಖಿ ಚಿಂತನೆಗಳನ್ನು ಹೊಂದಿಕೊಂಡು ಜೊತೆಗೆ ಅನ್ಯಾಯವಾದವರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳುವಂತ ಗುಣಗಳನ್ನು ಹೊಂದಿರುವ ರಮೇಶ ನಾಯಕ ಇವರನ್ನು ಗಂಗಾವತಿ ನಗರ ಘಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ನಾರಾಯಣಗೌಡ ಅವರು ಆದೇಶ ನೀಡಿದ್ದಾರೆ.ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ನೀಡಿರುವ ಕುವೆಂಪು ರವರ ಆಶಯಗಳನ್ನು ಈಡೇರಿಸಿ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಅನಿಲ್ ಆನೆಗೊಂದಿ, ವೆಂಕಟೇಶ ದಂಡಿನ್, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *