ಜೋಗದ ನಾರಾಯಣಪ್ಪ ಅವರ ಕುಟುಂಬದವರ ಕಾರ್ಯ ಇತರರಿಗೆ ಮಾದರಿ.. ಮಾಜಿ ಶಾಸಕ ಪರಣ್ಣ ಮುನವಳ್ಳಿ…

ಜೋಗದ ನಾರಾಯಣಪ್ಪ ಅವರ ಕುಟುಂಬದವರ ಕಾರ್ಯ ಇತರರಿಗೆ ಮಾದರಿ.. ಮಾಜಿ ಶಾಸಕ ಪರಣ್ಣ ಮುನವಳ್ಳಿ…

ಗಂಗಾವತಿ. ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ಕಳೆದ 9 ವರ್ಷಗಳಿಂದ 5,000 ನೋಟು ಪುಸ್ತಕಗಳನ್ನು ವಿತರಿಸುತ್ತಾ ಬಂದಿರುವ ಜೋಗದ ನಾರಾಯಣಪ್ಪ ನಾಯಕ ಅವರ ಕುಟುಂಬದವರ ಕಾರ್ಯ ಇತರೆ ದಾನಿಗಳಿಗೆ ಮಾದರಿಯಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ಮಂಗಳವಾರದಂದು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕರವರ ವಿವಾಸದಲ್ಲಿ ಅವರ ಕುಟುಂಬದವರೊಂದಿಗೆ 5000ಕ್ಕೂ ಅಧಿಕ ನೋಟ್ ಪುಸ್ತಕಗಳನ್ನು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ಬಡ ಮಕ್ಕಳಿಗೆ ವಿತರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅವಸಾನ ದ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳ ರಕ್ಷಣೆಗೆ ಸರಕಾರ ಮುಂದಾಗ ಬೇಕಿದೆ. ದೇಶದ ಪ್ರಗತಿ ಶಿಕ್ಷಣದ ಮೇಲೆ ಅವಲಂಬಿತವಾಗಿದ್ದು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಯೋಜನೆ ಅಡಿಯಲ್ಲಿ ಸಹಕಾರಿ ಶಾಲೆಗಳಿಗೆ ಶಿಕ್ಷಕರು ನೇಮಕವಾಗಬೇಕು ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಬೇಕು ಇದರಿಂದ ಬಡ ಮಕ್ಕಳ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.. ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳದ ಸಂಸದ ರಾಜಶೇಖರ್ ಹಿಟ್ನಾಳ್. ಮಾತನಾಡಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಜೋಗದ ಅವರ ಕುಟುಂಬದವರ ಸಹಕಾರ ಅವರಲ್ಲಿನ ಶಿಕ್ಷಣದ ಬಗ್ಗೆ ಇರುವ ಅಭಿಮಾನ ಮುಕ್ತ ಕಂಠದಿಂದ ಪ್ರಶಂಶಿಸಿದರು. ಕಲ್ಮಠದ ಡಾಕ್ಟರ್ ಕೊಟ್ಟೂರು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವನ್ನು ವಹಿಸಿದ್ದರು. ವೇದಿಕೆ ಯಲ್ಲಿ. ನಗರಸಭೆಯ ಅಧ್ಯಕ್ಷರು ಹಿರಾ ಬಾಯಿ ನಾಯಕ್ ಸಮಾಜದ ಅಧ್ಯಕ್ಷ ವೀರಭದ್ರಪ್ಪ ನಾಯಕ್. ಕೃಷ್ಣಪ್ಪ ನಾಯಕ್. ಬಸಪ್ಪ ನಾಯಕ್ ಹನುಮಂತಪ್ಪ ನಾಯಕ್. ದೈಹಿಕ ಶಿಕ್ಷಣಾಧಿಕಾರಿ ಸರಸ್ವತಿ ಸುರೇಶ ಸಿಂಗನಾಳ. ಪಂಪಾಪತಿ ದಳಪತಿ ದುರ್ಗಪ್ಪ. ಮಲ್ಲೇಶಪ್ಪ ಹೊಸಮಲ್ಲಿ. ಇತರರು ಉಪಸ್ಥಿತರಿದ್ದರು. ಜೋಗದ ನಾರಾಯಣಪ್ಪ ನಾಯಕ್ ಸ್ವಾಗತಿಸಿದರು. ವೇದಿಕೆಯಲ್ಲಿನ ಗಣ್ಯರು ನೋಟ್ ಪುಸ್ತಕ ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *