ಕಂಪ್ಲಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಕಾರ್ತಿಕ ವನಭೋಜನ ಕಾರ್ಯಕ್ರಮ…

ಕಂಪ್ಲಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಕಾರ್ತಿಕ ವನಭೋಜನ ಕಾರ್ಯಕ್ರಮ…

ಬಳ್ಳಾರಿ / ಕಂಪ್ಲಿ : ಪಟ್ಟಣದ ಕುರುಗೋಡು ರಸ್ತೆಯ ಸಣಾಪುರ ವಿತರಣಾ ನಾಲೆಯ ದಂಡೆಯಲ್ಲಿರುವ ಆಮ್ಮುಳ ಸಾಂಬಶಿವರಾವ್ ನೇತೃತ್ವದ ಶ್ರೀ ಶಿರಡಿ ಸಾಯಿಬಾಬ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಥಮ ಗುರುವಾರವಾದ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಕಾರ್ತಿಕ ದೀಪೋತ್ಸವ ಮತ್ತು ಕಾರ್ತಿಕ ವನಭೋಜನ ಕಾರ್ಯಕ್ರಮಗಳು ಜರುಗಿದವು.ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸಾಯಿಬಾಬಾ ಆವರ ಆಮೃತ ಶಿಲಾ ಮೂರ್ತಿಗೆ ವಿವಿಧ ಅಭಿಷೇಕಗಳು ಸೇರಿದಂತೆ ವಿವಿಧ ಅರ್ಚನೆಗಳು ಸಕಲ ಸದ್ಭಕ್ತರ ಸಮ್ಮುಖದಲ್ಲಿ ಜರುಗಿದವು. ನಂತರ ಅಮೃತ ಶಿಲಾಮೂರ್ತಿಗೆ ನೂರಾರು ಸಾಯಿ ಸದ್ಭಕ್ತರು ಪುಷ್ಪಾರ್ಪಣೆ ಮಾಡಿದರು. ಮಹಾಮಂಗಳಾರತಿಯ ನಂತರ ಸಾಯಿ ಭಜನೆ, ಸಾಯಿ ನಾಮಾವಳಿ, ಸಾಯಿ ಗೀತೆಗಳನ್ನು, ಸಾಯಿ ವೃತ ಪ್ರಸಂಗಗಳನ್ನು ಭಕ್ತರು ಪ್ರಸ್ತುತ ಪಡಿಸಿದರು.ನಂತರ ಸಕಲ ಸದ್ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ, ಕಾರ್ತಿಕ ವನಭೋಜ ಜರುಗಿತು. ಸಂಜೆ ಮಂದಿರದ ತುಂಬೆಲ್ಲಾ ದೀಪಗಳನ್ನು ಬೆಳಗಿರುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಆಚರಣೆ ಮಾಡಿದರು. ನಂತರ ಸಂಜೆಯ ಆರತಿಯ ನಂತರ ಸಾಯಿಬಾಬಾ ಅವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವವು ಜರುಗಿತು.ಕಾರ್ತಿಕ ದೀಪೋತ್ಸವ ಹಾಗೂ ಕಾರ್ತಿಕ ವನಭೋಜನಾ ಕಾರ್ಯಕ್ರಮದಲ್ಲಿ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳ ಸದ್ಭಕ್ತರು, ಸಾರ್ವಜನಿಕರು, ಸಾಯಿಬಾಬಾ ಮಂದಿರದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *