2003-04ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಎಚ್. ವೀರಾಪುರ ಗ್ರಾಮದಲ್ಲಿ ಬಹಳ ವಿಜೃಂಭಣೆಯಿಂದ ಮಾಡಲಾಯಿತು.

ಹಳೆಯ ವಿದ್ಯಾರ್ಥಿಯಾದ ಜೀವಿತ ರವರು ಮಾತನಾಡಿ ಗುರುಗಳು ನಮಗೆ ದಾರಿದೀಪ. ಅವರ ಆದರ್ಶ ಗುಣಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಜೊತೆಗೆ ಅವರು ಹೇಳಿದ ಸತ್ಯ, ಅಹಿಂಸೆ ಹಿರಿಯರ ಬಗ್ಗೆ ಗೌರವ ಹೊಂದೋಣ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಬಿ ಕೊಟ್ರಪ್ಪ ರವರು ವಹಿಸಿದ್ದರು. ಹಳೆಯ ವಿದ್ಯಾರ್ಥಿಯಾದ ಖಾಜಾ ಮೊಹಿದ್ದೀನ್ ನಿರೂಪಿಸಿದರು, ಶಿವಪ್ಪ ಇವರು ಸ್ವಾಗತಿಸಿದರು, ಅನಿತಾ ಇವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
