ಶ್ರೀ ಅಯ್ಯಪ್ಪಸ್ವಾಮಿಗೆ ಮಾಸ ಪೂಜೆಯ ಸಂಭ್ರಮ….

ಶ್ರೀ ಅಯ್ಯಪ್ಪಸ್ವಾಮಿಗೆ ಮಾಸ ಪೂಜೆಯ ಸಂಭ್ರಮ.

ಗಂಗಾವತಿ: ನಗರದ ಅಯ್ಯಪ್ಪ ಗಿರಿ ಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ರವಿವಾರದಂದು ಮಾಸ ಪೂಜೆಯನ್ನು ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.ಬೆಳಿಗ್ಗೆ ದೇವಸ್ಥಾನದ ಅರ್ಚಕ ಶಂಕರ ಭಟ್ ದಿವಾಕರ್ ಅವರಿಂದ ಅಭಿಷೇಕ ಅಷ್ಟೋತ್ತರ ಪಾರಾಯಣ ರುದ್ರ ಸಹಿತ ಪಂಚಾಮೃತ ಅಭಿಷೇಕ ಸೇರಿದಂತೆ ಶ್ರೀ ಲಕ್ಷ್ಮಿ ಗಣಪತಿ ಹೋಮ ಸಂಪನ್ನಗೊಳಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ತಾಯಿ ಬಾಬಾ ಮಾತನಾಡಿ ಅಯ್ಯಪ್ಪ ಸ್ವಾಮಿ ನಾಮ ಸ್ಮರಣೆಯಿಂದ ಸಂಕಷ್ಟಗಳು ಪರಿಹಾರವಾಗುವುದು.ಮಕರ ಸಂಕ್ರಾಂತಿಗೆ ಇನ್ನೂ ಎರಡು ಮೂರು ತಿಂಗಳು ಬಾಕಿ ಇದ್ದು ನವಂಬರ್ 3ರಂದು ಮಾಸ ಪೂಜೆ ಜರಗಳಿದ್ದು ಜನವರಿ 31 ರಂದು ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರತಿಷ್ಠಾಪನೆಗೊಂಡು 12 ವರ್ಷ ಸಂಭ್ರಮಾಚರಣೆ ಪ್ರಯುಕ್ತ ಕುಂಬೋತ್ಸವ ಹದಿನೆಂಟು ಮೆಟ್ಟಿಲುಗಳಿಗೆ ವಿಶೇಷ ಅಲಂಕಾರ. ಸೇರಿದಂತೆ ಭಕ್ತರಿಂದ ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.ಡಾಕ್ಟರ್ ಚಂದ್ರಪ್ಪ ಸೇರಿದಂತೆ ಗುರುಸ್ವಾಮಿಗಳು ಹಾಗೂ ಅಪಾರ ಭಕ್ತಾದಿಗಳು ಭಾಗವಹಿಸಿ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜಟ್ಟಿ ವೀರಪ್ರಸಾದ. ತಾಳೂರು ರಾಮಕೃಷ್ಣ. ಜಟ್ಟಿ ವೆಂಕಟ್ರಮಣ.ಡಾಕ್ಟರ್ ಸೋಮರಾಜ ಸೇರಿದಂತೆ ಹಿರಿಯ ಗುರುಗಳಾದ ತಾತಾಯ್ಯ ಸ್ವಾಮಿ ಅನೇಕರು ಉಪಸ್ಥಿತರಿದ್ದರು.ನಂತರ ಮಾಸ ಪೂಜೆ ನಿಮಿತ್ತವಾಗಿ ಬಾಪಿರೆಡ್ಡಿ ಕ್ಯಾಂಪಿನ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಗ್ರಾಮಸ್ಥರಿಂದ ತೀರ್ಥ.ಮಹಾಪ್ರಸಾದ ಜರುಗಿತು.

Leave a Reply

Your email address will not be published. Required fields are marked *