ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ …

ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ …

ಗಂಗಾವತಿ. ನಗರದ ಜಯನಗರದಲ್ಲಿರುವ ಉದ್ದೇಶಿ ತ ಶ್ರೀ ಕ ನ್ನಿಕಾಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದಿಗಳಿಗೆ ಗುರುವಾರದಂದು ಇತಿಶ್ರೀ ಹಾಡುವುದರ ಮೂಲಕ ಈ ಹಿಂದಿನ ಅಧ್ಯಕ್ಷ ಎನಿಸಿಕೊಂಡಿರುವ ದರೋಜಿ ಶ್ರೀರಂಗಶೆಟ್ಟಿ ಅವರನ್ನು ಉಚ್ಛಾಟಿಸಿ ನೂತನ ಅಧ್ಯಕ್ಷರನ್ನಾಗಿ ಜಿ ಸುರೇಶ್ ಶೆಟ್ಟಿ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಎಂದು ಗಂಗಾವತಿ ನಗರ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪಾರಾಣಿ ಲಕ್ಷ್ಮಣ ರಾಯಚೂರು . ಪ್ರಧಾನ ಕಾರ್ಯದರ್ಶಿ ಈಶ್ವರ ಶೆಟ್ಟಿ. ಖಜಾಂಚಿ ಮಾರುತಿ ಪ್ರಸಾದ್ ಸಹಕಾರದರ್ಶಿ ಪಾಲ್ಗಂಟಿ ಗೋಪಾಲಕೃಷ್ಣ ಶೆಟ್ಟಿ. ಸೇರಿದಂತೆ ನಿರ್ದೇಶಕರುಗಳಾದ ಸಿಎಚ್ ಶ್ರೀನಿವಾಸ ಶೆಟ್ಟಿ ಮಿಟಾಯಿಗಾರ ವೀರಭದ್ರಪ್ಪ ಸೇರಿದಂತೆ ಇತರರು ಹೇಳಿದರು ಅವರು ಗುರುವಾರದಂದು ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜ ಸರ್ವ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ 18 ವರ್ಷದಿಂದ ಸಮಾಜದ ಅಧ್ಯಕ್ಷರಾಗಿ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀರಂಗ ದರೋಜಿ ಸಮಾಜಕ್ಕೆ ನೀಡಿದ ಕೊಡುಗೆ ಏನು. ಯಾವುದೇ ಸರ್ವ ಸದಸ್ಯರ ಸಭೆಯನ್ನು ಕರೆಯದೆ ಲೆಕ್ಕಪತ್ರವನ್ನು ಸಮಾಜ ಬಾಂಧವರಿಗೆ ನೀಡದೆ ಇತ್ತೀಚಿಗಷ್ಟೇ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಇಲ್ಲದ ಸಲದ ಆರೋಪ ಮಾಡುವುದು ಎಷ್ಟು ಸೂಕ್ತ ಎಂದು ಅಧ್ಯಕ್ಷರು ಪ್ರಶ್ನೆ ಮಾಡುವುದರ ಮೂಲಕ ಅವರನ್ನು ಸಂಪೂರ್ಣವಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ಸರ್ವ ಸದಸ್ಯರ ಸಭೆಯಲ್ಲಿ ಘೋಷಿಸಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು. ನೂತನವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಮಾತನಾಡಿ ದೇವಸ್ಥಾನದ ಹಣವನ್ನು ದುರುಪಯೋಗ ಪಡಿಸಿಕೊಂಡ ಈ ಹಿಂದಿನ ಅಧ್ಯಕ್ಷರು ಹಾಗೂ ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದವರು ರಕ್ತಕಾರಿ ಸರ್ವನಾಶವಾಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ 10 ಹಲವಾರು ಬಾರಿ ಮನೆಗೆ ತೆರಳಿ ಮುಕ್ತ ಕಂಟದಿಂದ ಆಹ್ವಾನಿಸಿದರು ಸಹ ಸ್ಪಂದಿಸದ ಶ್ರೀ ರಂಗ ದರೋಜಿ ಮುಕ್ತ ಚರ್ಚೆಗೆ ಆಹ್ವಾನಿಸಿದ್ದಾರೆ. ಜೊತೆಗೆ ಆರ್ಯವೈಶ್ಯ ಮಹಾಸಭಾಕ್ಕೂ ಹಾಗೂ ಆರ್ಯವೈಶ್ಯ ಸಮಾಜಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೆಲವು ಮುಖಂಡರು ಐದು ಜನ ಹಿರಿಯ ಸದಸ್ಯರನ್ನು ಗೌರವ ಸಲಹೆಗಾರರನ್ನಾಗಿ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವೀರಭದ್ರಪ್ಪ ಶೆಟ್ಟಿ ಕಾಕು ಮನೆ ಶ್ರೀಧರ್ ಶೆಟ್ಟಿ ವಾಸುದೇವ ಶೆಟ್ಟಿ ಸತೀಶ್ ಶೆಟ್ಟಿ ತೆಕ್ಕಲಕೋಟೆ ಚಿದಂಬರ ಶೆಟ್ಟಿ. ರಾಮಪ್ರಸಾದ ಶೆಟ್ಟಿ ರೇಷ್ಮೆ ಬಸವರಾಜ ಶೆಟ್ಟಿ ಮಂಜುನಾಥ್. ಸೇರಿದಂತೆ ನಿರ್ದೇಶಕರುಗಳು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು ಪ್ರಕಟಣೆಯ ಕೃಪೆಗಾಗಿ . ಗಂಗಾವತಿ ನಗರ ಆರ್ಯವೈಶ್ಯ ಸಮಾಜ ಪ್ರಧಾನ ಕಾರ್ಯದರ್ಶಿಗಳು ಶ್ರೀ ಈಶ್ವರ ಶಕ್ತಿ

Leave a Reply

Your email address will not be published. Required fields are marked *