ಪಲ್ಲಕ್ಕಿ ಮೇಲೆ ತೆರಳಲು ಅವಕಾಶ ನೀಡದ ಪೊಲೀಸರು: ಭಕ್ತರ ಪ್ರೋಟೆಸ್ಟ್

ಪಲ್ಲಕ್ಕಿ ಮೇಲೆ ತೆರಳಲು ಅವಕಾಶ ನೀಡದ ಪೊಲೀಸರು: ಭಕ್ತರ ಪ್ರೋಟೆಸ್ಟ್. ಗಂಗಾವತಿ

ಪಲ್ಲಕ್ಕಿ ಮೇಲೆ ತೆರಳಲು ಅವಕಾಶ ನೀಡದ ಪೊಲೀಸರು: ಭಕ್ತರ ಪ್ರೋಟೆಸ್ಟ್.

ಗಂಗಾವತಿ :04ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಭಕ್ತರು ಮತ್ತು ಪೊಲೀಸರ ಮಧ್ಯೆ ವಾಕ್ಸಮರ ನಡೆದು ಸಾವಿರಾರು ಭಕ್ತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ಅಂಜನಾದ್ರಿಯಲ್ಲಿ ನಡೆಯಲಿದ್ದ ಹನುಮಾಲೆ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಪೊಲೀಸರು ಅಡ್ಡಿಪಡಿಸಿದರು ಎನ್ನಲಾಗಿದ್ದು, ಇದು ಹನುಮ ಭಕ್ತರನ್ನು ಇನ್ನಿಲ್ಲದಂತೆ ಕೆರಳಿಸಿತು, ಇದು ಪೋಲಿಸರು ಮತ್ತು ಭಕ್ತರ ವಾಕ್ಸಮರಕ್ಕೂ ಕಾರಣವಾಯಿತು.ಅಂಜನಾದ್ರಿ ಬೆಟ್ಟದಲ್ಲಿ ಬೆಳಗಿನ ಜಾವ ೨ ಗಂಟೆಯಿಂದ ಗಣಪತಿ ಹೋಮ ನವಗ್ರಹ ಹೋಮ ಮತ್ತು ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ಪಲ್ಲಕ್ಕಿಯನ್ನು ಹನುಮ ಬೆಟ್ಟವನ್ನು ಪರಿಕ್ರಮ ಮಾಡಿ ಉತ್ತರದಿಂದ ಬೆಟ್ಟ ಹತ್ತುತ್ತಿರುವಾಗ ಪೋಲಿಸರು ಪಲ್ಲಕ್ಕಿಯನ್ನು ತಡೆದರು.ಬೆಟ್ಟ ಹತ್ತಲು ಪೊಲೀಸರು ಅವಕಾಶ ನೀಡಲಿಲ್ಲ. ಅಂಜನಾದ್ರಿ ಬೆಟ್ಟದ ಎಡ ಭಾಗ ಅಂದರೆ ದಕ್ಷಿಣದಿಂದ ಭಕ್ತರು ಇಳಿಯಲು ಮಾತ್ರ ಅವಕಾಶವಿದ್ದು ಹತ್ತಲು ಅವಕಾಶವಿಲ್ಲ ಎಂದರು. ಧಾರ್ಮಿಕ ಆಚರಣೆಗೆ ಉತ್ತರ ಭಾಗದಿಂದಲೇ ಬೆಟ್ಟ ಹತ್ತಲು ಅವಕಾಶ ಮಾಡಿಕೊಡುವಂತೆ ಭಕ್ತರು ಮನವಿ ಸಲ್ಲಿಸಿದರು.ಆದರೆ ಪೊಲೀಸರು ಇದಕ್ಕೆ ಆಸ್ಪದ ಕೊಡದೇ ತಡೆದರು. ಹೋಮ ಅಯೋಜಿಸಿದ್ದ ಮುಖಂಡರು ಬೆಟ್ಟದ ಮೇಲಿನಿಂದಲೇ ಹಲವು ಬಾರಿ ಮೈಕ್ ಮೂಲಕ ಪಲ್ಲಕ್ಕಿ ಮೇಲೆ ಬರಬೇಕು. ಪಲ್ಲಕ್ಕಿ ಹೋಮದ ಸ್ಥಳಕ್ಕೆ ಬಂದರೆ ಮಾತ್ರ ಹೋಮದ ಪೂರ್ಣಹುತಿ ಆಗುತ್ತೆ.ದಯವಿಟ್ಟು ಧಾರ್ಮಿಕ ಕಾರ್ಯಕ್ರಮಕ್ಕೆ ಸಹಕರಿಸಿ ಎಂದು ಸಾಕಷ್ಟು ಬಾರಿ ಸಂಘಟಕರು ಮನವಿ ಮಾಡಿದರು. ಆದರೆ ಸ್ಥಳದಲ್ಲಿದ್ದ ಪೋಲಿಸ್ ಅಧಿಕಾರಿಗಳು ಸ್ಪಂದಿಸದಿದ್ದಾಗ ಆಕ್ರೋಶಗೊಂಡ ಮಾಲಾಧಾರಿಗಳು ಬೆಟ್ಟವನ್ನು ಯಾರೊಬ್ಬರು ಹತ್ತದಂತೆ ಹಾಗೂ ಇಳಿಯದಂತೆ ನಿರ್ಬಂಧಿಸುವುದಾಗಿ ಹೇಳಿ ಮೆಟ್ಟಿಲುಗಳ ಮೇಲೆ ಧರಣಿಗೆ ಕುಳಿತರು.ಈ ಸಂದರ್ಭದಲ್ಲಿ ಭಕ್ತರ ದಟ್ಟಣೆಯಾಗುತ್ತಲೆ ಹೋಯಿತು. ಈ ಸಂದರ್ಭದಲ್ಲಿ ನಾರಯಣ ಎಂಬ ಇನ್ಸ್ ಪೆಕ್ಟರ್ ಹಾಗೂ ಭಕ್ತರ ಮಧ್ಯೆ ಮಾತಿನಚಕಮಕಿ ನಡೆಯಿತು. ಅಧಿಕಾರಿಯ ವರ್ತನೆ ಖಂಡಿಸಿದ ಭಕ್ತರು ಮತ್ತು ಹನುಮಾನ್ ಮಾಲೆಧಾರಿಗಳು ಪಲ್ಲಕ್ಕಿ ಮೇಲೆ ತೆರಳಲು ಅವಕಾಶ ಕಲ್ಪಿಸದಿದ್ದರೆ ಯಾರು ಬೆಟ್ಟದಿಂದ ಕೆಳಗೆ ಇಳಿಯಂತೆ ಅಡ್ಡ ಕೂರುವುದಾಗಿ ತಿಳಿಸಿದ ನಂತರ ಹಿರಿಯ ಅಧಿಕಾರಿ ಬಂದು ಪಲ್ಲಕ್ಕಿ ಮೇಲೆ ತೆರಳಲು ಅವಕಾಶ ಕಲ್ಪಿಸಿದರು.( ಬಾಕ್ಸ್ ಐಟಂಗಾಗಿ ಮನವಿ) ತಹಸೀಲ್ದಾರರನ್ನು ತಡೆದ ಪೊಲೀಸರು: ಮಾತಿನ ಚಕಮಕಿತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಡೆಯುತ್ತಿದ್ದ ಹನುಮಾಲೆ ಅಭಿಯಾನದ ಜವಾಬ್ದಾರಿ ಹೊತ್ತು ಬೆಟ್ಟಕ್ಕೆ ಆಗಮಿಸಲಿದ್ದ ಲಕ್ಷಾಂತರ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದ ಅಧಿಕಾರಿಗಳ ಚಲನಾ-ವಲನಕ್ಕೆ ತಡೆಯೊಡ್ಡಿದ ಪರಿಣಾಮ ಅಧಿಕಾರಿ ಹಾಗೂ ಪೊಲೀಸರ ಮಧ್ಯೆ ವಾಗ್ವಾದವಾದ ಘಟನೆ ನಡೆದಿದೆ.ಅಂಜನಾದ್ರಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯೂ ಆಗಿರುವ ಗಂಗಾವತಿ ತಹಸೀಲ್ದಾರ್ ಯು. ನಾಗರಾಜ್ ಹಾಗೂ ಗಂಗಾವತಿ ನಗರಸಭೆಯ ಕಮೀಷನರ್ ಆರ್. ವಿರೂಪಾಕ್ಷಮೂರ್ತಿ ಅವರಿಗೆ ಬೆಟ್ಟದ ಸಮೀಪ ಹೋಗದಂತೆ ಪೊಲೀಸರು ತಡೆಯೊಡ್ಡಿದ ಘಟನೆ ನಡೆಯಿತು.ಪೊಲೀಸರ ವಿರೋಧದ ಮಧ್ಯೆಯೂ ಭಕ್ತರಿಗೆ ಕಲ್ಪಿಸಲಾದ ಸೌಲಭ್ಯಗಳ ಪರಿಶೀಲನೆಗೆ ಮುಂದಾದ ನಗರಸಭೆಯ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಅವರ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಎರಗಲು ಮುಂದಾದರು.ಇದರಿಂದ ಕೆರಳಿ ಕೆಂಡವಾದ ಕಮೀಷನರ್ ತೀವ್ರ ತರಾಟೆಗೆ ತೆಗೆದುಕೊಂಡರು. ಕೊರಳಲ್ಲಿ ಗುರುತಿನ ಚೀಟಿ ಇದ್ದೂ, ತಾವೊಬ್ಬ ಗ್ರೇಡ್-೧ ಆಫಿಸರ್ ಆಗಿದ್ದರೂ ಕೂಡ ಸಾಮಾನ್ಯರಂತೆ ನನ್ನ ಮೇಲೆರಗಲು ಬರುವೆಯಾ..? ಎಂದು ಪ್ರಶ್ನಿಸಿ ಕಮೀಷನರ್ ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ತಹಸೀಲ್ದಾರ್ ಯು. ನಾಗರಾಜ್ ಕೂಡ ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಬಂದ ಮೇಲಧಿಕಾರಿಗಳುವಾತಾವರಣ ತಿಳಿ ಮಾಡಿ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಟ್ಟರು.ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿ, ಕಮೀಷನರ್ ಎಂಬ ಪರಿಜ್ಞಾನ ಇಲ್ಲದಂತೆ ಪೊಲೀಸರು ವರ್ತಿಸಿದ್ದಾರೆ. ನಾವು ಅಧಿಕಾರಿಗಳು ಹೇಳಿದರೂ ದರ್ಪ ತೋರಿದ್ದಾರೆ. ಕೇವಲ ಅಧಿಕಾರಿಗಳ ಜೊತೆ ಮಾತ್ರವಲ್ಲ, ಪತ್ರಕರ್ತರು, ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಯೂ ಪೊಲೀಸರ ವರ್ತನೆ ಸರಿ ಇರಲಿಲ್ಲ ಎಂದರು.

Leave a Reply

Your email address will not be published. Required fields are marked *