13 ವರ್ಷದ ಒಳಗಿನ ವಿದ್ಯಾರ್ಥಿಗಳಿಗಾಗಿ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಚಿತ್ರಕಲಾ ಸ್ಪರ್ಧೆ. ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿ ಪ್ರಥಮ ಸ್ಥಾನ ಸ್ಥಾನ….

ಗಂಗಾವತಿ. ನಗರದ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಮಂಗಳವಾರದಂದು 13 ವರ್ಷದ ಒಳಗಿನ ಮಕ್ಕಳಿಗಾಗಿ ಪೀಸ್ ಪೋಸ್ಟರ್ ಕಾಂಪಿಟೇಶನ್. ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಸ್ಪರ್ಧೆಗೆ ನಗರದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಕುಮಾರಿ ಜಜ ಉಸ್ನ ಹಾಗೂ ಕುಶ್ ರಾಜ್ ಪುರೋಹಿತ್ ಪ್ರಥಮ ಸ್ಥಾನ ಪಡೆದು ಕೊಂಡರು. ಟುಗೆದರ್ ವ ನ್ ವಿಷಯ ಕುರಿತು ಚಿತ್ರಕಲೆಯಲ್ಲಿ ಪಾಲ್ಗೊಂಡ ಮುದ್ದು ಮಕ್ಕಳು ತಮ್ಮದೇ ಆದ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಶಿವಕುಮಾರ್ ಮಾಲಿ ಪಾಟೀಲ್ ಮಾತನಾಡಿ ಬಾಲ್ಯದಲ್ಲಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸಾಕಷ್ಟು ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ಸ್ಪರ್ಧೆಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಂಬಣ್ಣ ಐಲಿ. ಖಜಾಂಚಿ ಶಿವಪ್ಪ ಗಾಳಿ. ಹಾಗೂ ಸ್ಪರ್ಧೆಯ ನಿರ್ಣಯಕರಾಗಿ ಖ್ಯಾತ ಚಿತ್ರ ಕಲಾವಿದ.. ನಿವೃತ್ತ ಶಿಕ್ಷಕ ರಾಘವೇಂದ್ರ ಪುರೋಹಿತ್ ಹಿರಿಯ ವೈದ್ಯಕರು ಚಂದ್ರಪ್ಪ ಡಾ. ಪಂಪಾಪತಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು
