ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಗೆ ಗೈರು ಹಾಜರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ: ನಿರುಪಾದಿ ಹಡಪದ..

ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಗೆ ಗೈರು ಹಾಜರಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ: ನಿರುಪಾದಿ ಹಡಪದ..

ಗಂಗಾವತಿ: ಜುಲೈ-4 ಶುಕ್ರವಾರದಂದು ಮಾನ್ಯ ತಹಶೀಲ್ದಾರರ ನೇತೃತ್ವದಲ್ಲಿ ಸರ್ಕಾರದ ಇಲಾಖೆಗಳ ತಾಲೂಕ ಮಟ್ಟದ ಹಡಪದ ಅಪ್ಪಣ್ಣ ಜಯಂತಿಯ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಪೂರ್ವಭಾವಿ ಸಭೆಗೆ ಸುಮಾರು 39 ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕಾಗಿದ್ದು, ಆದರೆ ಇದರಲ್ಲಿ ಕೇವಲ ಗಂಗಾವತಿ ನಗರಸಭೆ, ಶಿಕ್ಷಣ ಇಲಾಖೆ ಮತ್ತು ಎ.ಪಿ.ಎಂ.ಸಿ. ಇಲಾಖೆಯ ಸಿಬ್ಬಂದಿಗಳು ಮಾತ್ರ ಭಾಗವಹಿಸಿದ್ದು, ಇನ್ನುಳಿದ 36 ಇಲಾಖೆಯ ಸಿಬ್ಬಂದಿಗಳು ಗೈರು ಹಾಜರಾಗಿರುತ್ತಾರೆ. ಕಾಟಾಚಾರಕ್ಕೆ ಸಭೆಗಳನ್ನು ಕರೆದು ಹಿಂದುಳಿದ ವರ್ಗದ ಗಂಗಾವತಿ ಹಡಪದ ಸಮಾಜದ ಬಂಧುಗಳಿಗೆ ಸರ್ಕಾರಿ ಇಲಾಖೆಗಳು ನೋವು ಉಂಟು ಮಾಡಿವೆ ಎಂದು ಹಡಪದ ಅಪ್ಪಣ್ಣ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ನಿರುಪಾದಿ ಹಡಪದ ತೀವ್ರ ಕಳವಳ ವ್ಯಕ್ತಪಡಿಸಿದರು. ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸರ್ಕಾರ ಕೆಳವರ್ಗದ ಸಮಾಜಗಳನ್ನು ಮೇಲೆತ್ತುವ ಉದ್ದೇಶದಿಂದ ಜಯಂತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಇಲಾಖೆಗಳಲ್ಲಿ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮಗಳಾಗಿ ಮಾಡುವುದರಿಂದ 12ನೇ ಶತಮಾನದ ಹಡಪದ ಅಪ್ಪಣ ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಪಡಿಸುವ, ಮುಂಬರುವ ಸಮಾಜದ ಪೀಳಿಗೆಗೆ ನೆನಪುಳಿಯುವ ವಿಚಾರದ ಅಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಶರಣರ ಇತಿಹಾಸವನ್ನು ಪರಿಚಯಿಸಿಕೊಡುವ ಕಾರ್ಯಕ್ರಮಗಳಿಗೆ, ಕೆಲವು ಸರ್ಕಾರಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿ ಅಗೌರವ ತೊರಿರುತ್ತಾರೆ. ಇದನ್ನು ನಮ್ಮ ಹಡಪದ ಅಪ್ಪಣ್ಣ ಸಮಾಜದ ತೀವ್ರ ಖಂಡಿಸುತ್ತದೆ, ಕೂಡಲೇ ತಹಶೀಲ್ದಾರರು ಗೈರು ಹಾಜರಾದ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕಾನೂನು ಕ್ರಮ ಜರುಗಿಸಿ, ಕೈಗೊಂಡ ಕ್ರಮದ ಬಗ್ಗೆ ನಮ್ಮ ಸಮಾಜಕ್ಕೆ ತಿಳಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಹಡಪದ ಸಮಾಜದ ಹಿರಿಯರು, ಮುಖಂಡರು, ಯುವಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *