ಫೆಬ್ರವರಿ 12ರಂದು ಶ್ರೀ ವ oಕಲ ಕುಂಟ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಉದ್ಭವ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ…

ಗಂಗಾವತಿ. ತಾಲೂಕಿನ ಮಲ್ಲಾಪುರ ಗ್ರಾಮದ ಶ್ರೀ ವಾಲಬದ್ರೇಶ್ವರ ದೇವಸ್ಥಾನದ ರಸ್ತೆ ಪಾಪಯ್ಯ ಕಾಲುವೆ ಸಮೀಪದಲ್ಲಿರುವ ಉದ್ಭವ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಮಾಘ ಬಹುಳ ದಿನಾಂಕ 12 ಗುರುವಾರದಂದು ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಪಕೀರಪ್ಪ ಪೂಜಾರಿ ಹೇಳಿದರು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಲ್ಲು ಬೆಟ್ಟಗಳ ಮಧ್ಯೆ ಉದ್ಭವಿಸಿದ ಶ್ರೀ ಆಂಜನೇಯ ಸ್ವಾಮಿ ಉತ್ತರಕ್ಕೆ ದೇವಸ್ಥಾನ ಹಾಗೂ ಮುಖ ಹೊಂದಿದ್ದು ಅತ್ಯಂತ ಜಾಗೃತವಾಗಿದೆ.

ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಲ್ಲಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಹೋಗಿ ಬರುವುದು ಪಂಚಾಮೃತ ಅಭಿಷೇಕ ಅಷ್ಟ ಅವಧಾನ ಸೇವೆ ವಾಯುಸ್ತುತಿ ಪಾರಾಯಣ ಎಲೆ ಪೂಜೆ. ವೈವಿಧ್ಯಮಯ ಹೂಗಳಿಂದ ಅಲಂಕಾರ ಸೇರಿದಂತೆ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ಜರಗಲಿದ್ದು ಸಕಲ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಶ್ರೀ ಆಂಜನೇಯ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

