ಭರತ್‌ರೆಡ್ಡಿ ಬಂಧನಕ್ಕೆ ಬಿಜೆಪಿ ನಾಯಕ ಬೂದಿ ಬಸವರಾಜ ಒತ್ತಾಯಭರತ್‌ ನಂತ ನೂರು ಕ್ರಿಮಿಗಳು ಬಂದರೂ ರೆಡ್ಡಿ ಅಲುಗಡಿಸಲಾಗದು.

ಭರತ್‌ರೆಡ್ಡಿ ಬಂಧನಕ್ಕೆ ಬಿಜೆಪಿ ನಾಯಕ ಬೂದಿ ಬಸವರಾಜ ಒತ್ತಾಯಭರತ್‌ ನಂತ ನೂರು ಕ್ರಿಮಿಗಳು ಬಂದರೂ ರೆಡ್ಡಿ ಅಲುಗಡಿಸಲಾಗದು.

ಗಂಗಾವತಿ : ನಾರ ನಂತಹ ಕ್ರಿಮಿನಲ್‌ಗಳು ನೂರು ಜನ ಸೇರಿ ಷಡ್ಯಂತ್ರ ರೂಪಿಸಿದರೂ ಗಾಲಿ ಜನಾರ್ದನರೆಡ್ಡಿ ಗೆ ಯಾವುದೇ ತೊಂದರೆಯಾಗದು. ಆನೆಗೊಂದಿ ಹನುಮಪ್ಪನ ಹಾಗೂ ಗಂಗಾವತಿ ಮತಕ್ಷೇತ್ರದ ಜನ ಆಶೀರ್ವಾದ ಇರುವವರೆಗೂ ರೆಡ್ಡಿ ಅವರನ್ನು ಯಾರೊ ಏನು ಮಾಡಿಕೊಳ್ಳಲಾಗದು ಎಂದು ಬಿಜೆಪಿ ಮುಖಂಡ ಬೂದಿ ಬಸವರಾಜ ಕಾರಟಗಿ ಹೇಳಿದ್ದಾರೆ.ಇತ್ತೀಚಿನ ದಿನಗಳಲ್ಲಿ ನಾರಾ ಭರತ್‌ ರೆಡ್ಡಿಯ ಅಹಂಕಾರ ಹೆಚ್ಚಾಗಿದೆ. ಅಧಿಕಾರದ ಮದ ಹಣದ ದರ್ಪ ತಲೆಗೆ ಏರಿದೆ. ಇದಕ್ಕೆ ಸ್ವತಃ ಬಳ್ಳಾರಿ ಜನರೇ ಸೂಕ್ತ ಕಾಲದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಭರತ್ ರೆಡ್ಡಿ ತೆಲೆಗೆ ಏರಿರುವ ಆಹಂಕಾರ ಮುರಿಯಲು ಬಳ್ಳಾರಿಯ ಸಮಸ್ತ ಜನ ಮುಂದಾಗಬೇಕು.ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಭರತ್‌ ರೆಡ್ಡಿಗೆ ತಕ್ಕ ಪಾಠ ಕಲಿಸುತ್ತೇವೆ. ಆಡಳಿತ ರೂಢ ಸರ್ಕಾರದ ಶಾಸಕನಾಗಿ ಅಧಿಕಾರದ ಮದದಿಂದ ವರ್ತಿಸಿದ ರೀತಿ ಇಡೀ ರಾಜ್ಯದ ಜನ ನೋಡಿದ್ದಾರೆ.ಶಾಸಕ ಜನಾರ್ದನ ರೆಡ್ಡಿ ಮನೆಯ ಮುಂದೆ ಗಲಭೆ ಎಬ್ಬಿಸುವ ಮೂಲಕ ಅದನ್ನು ರಾಜಕೀಯ ದಾಳವಾಗಿ ಮಾಡಿಕೊಂಡು ಬಿಜೆಪಿ ನಾಯಕರನ್ನು ಹತ್ತಿಕ್ಕುವ ಕುತಂತ್ರ ಭರತ್ ರೆಡ್ಡಿ ಮಾಡಿದ್ದ. ಈ ಘಟನೆಯಲ್ಲಿ ಅಮಾಯಕನಾಗಿದ್ದ ಸ್ವತಃ ತನ್ನದೇ ಪಕ್ಷದ ಕಾರ್ಯಕರ್ತನನ್ನು ಭರತ್‌ರೆಡ್ಡಿ ಕೊಲ್ಲಿಸಿದ್ದಾನೆ.ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭಿರವಾಗಿ ಪರಿಗಣಿಸಬೇಕು. ಶೂಟೌಟ್‌ನಂತ ಸಂಸ್ಕೃತಿಗೆ ನಾಂದಿ ಹಾಡಿರುವ ಶಾಸಕನ ರೂಪದಲ್ಲಿರುವ ಭಯೋತ್ಪಾದಕ ಭರತ್‌ ರೆಡ್ಡಿ ಯನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ಮುಖಂಡ ಬೂದಿ ಬಸವರಾಜ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *