ಪತ್ರಿಕೆ ವಿತರಕರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಿತ್ವಿಕ್:

ಗಂಗಾವತಿ: 04ಕೊಪ್ಪಳ ಡಿಇಆರ್ ಪೊಲೀಸ್ ಇಲಾಖೆಯಲ್ಲಿರುವ ಮಂಗಳೂರು ಗ್ರಾಮದ ಮಾರುತಿ ಹಳ್ಳಿ ಇವರ ಎರಡನೇ ಮಗ ರಿತ್ವಿಕ್ ಹಳ್ಳಿ ಇವರ ಜನ್ಮದಿನದ ಪ್ರಯುಕ್ತ ಸರಕಾರಿ ಆಸ್ಪತ್ರೆಗಳಲ್ಲಿ ಕೇವಲ ಹಾಲು, ಹಣ್ಣು, ಬ್ರೆಡ್ ನೀಡುವುದಷ್ಟೇ ಅಲ್ಲ ಅದರ ಜೊತೆ ಜೊತೆಯಲಿ ಮನೆ ಮನೆಗೆ ಹಾಲು ವಿತರಿಸುವ ವಿತರಕರಿಗೆ, ಪತ್ರಿಕೆ ವಿರತಣೆ ಮಾಡುವರು, ಪಿಗ್ನಿ ಏಜೆಂಟರು, ಕೋರಿಯಾರ್ ಸರ್ವಿಸ್ ನೀಡುವವರಿಗೆ ವಿಪರೀತವಾದ ಚಳಿ ಇರುವ ಕಾರಣ ಮುಂಜಾನೆ ನಾಲ್ಕು ಗಂಟೆಯಿಂದ ಕೆಲಸ ಮಾಡುವ ಬಡ ವಿತರಕರಿಗೆ ಒಂದು ಕಡೆ ಸೇರಿಸಿ ಅವರೆಲ್ಲರಿಗೂ ಜರ್ಕಿನ್ ವಿತರಣೆ ಮಾಡುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಶ್ರೀ ಚನ್ನಬಸವ ತಾತಾನ ಮಠದಲ್ಲಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಚಪ್ಪ ಸಿದ್ದಾಪುರ ಮಾತನಾಡಿ ಹುಟ್ಟು ಹಬ್ಬಗಳನ್ನು ಈಗ ದೊಡ್ಡ ದೊಡ್ಡ ಫಂಕ್ಷನ್ ಮೂಲಕ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಆದರೆ ಬಡವರು ನಿರ್ಗತಿಕರು ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಮಾಡುವವರಿಗೆ ಇಂತಹ ಒಳ್ಳೆಯ ಆಲೋಚನೆ ಮಾಡಿ ಚಳಿಗಾಲಕ್ಕೆ ಜರ್ಕಿನ್ ನೀಡಿರುವುದು ತುಂಬಾ ಉತ್ತಮವಾದ ಕೆಲಸ ಮತ್ತು ಇಂತಹ ಸೇವೆಯನ್ನು ಇನ್ನು ಹೆಚ್ಚೆಚ್ಚು ನೀಡುವಂತೆ ನಗರದ ಆರಾಧ್ಯ ದೈವ ಚನ್ನಬಸವ ಸ್ವಾಮಿ ಅವರಿಗೆ ಕರುಣಿಸಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಲೇರಿಯಾ ಲಿಂಕ್ ವರ್ಕ್ ರ ಹೆಚ್.ಸುರೇಶ,ಡಾ.ವಿಷ್ಣು ಸೇನಾ ಗಂಗಾವತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಮಂಜುನಾಥ ದರೋಜಿ,ಮಲ್ಲಿಕಾರ್ಜುನ ಹಿರೇಜಂತಕಲ್, ಕುಟುಂಬದವರು ಸೇರಿದಂತೆ ಇತರರು ಇದ್ದರು.

