ಸಹಕಾರ ಸಂಘಕ್ಕೆ ನಿರ್ದೇಶಕ ಸ್ಥಾನಕ್ಕೆ ಆಶಾ ರಾಣಿ ಆಯ್ಕೆ…

ಸಹಕಾರ ಸಂಘಕ್ಕೆ ನಿರ್ದೇಶಕ ಸ್ಥಾನಕ್ಕೆ ಆಶಾ ರಾಣಿ ಆಯ್ಕೆ…

ಗಂಗಾವತಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶ್ರೀಮತಿ ಆಶಾ ರಾಣಿ ಗಂಡ ಮಹೇಶ ಕನಕಾಪುರ ಇವರು ಗೆಲುವು ಸಾಧಿಸಿದ್ದಾರೆ ಅವರಿಗೆ ಶಿಕ್ಷಕರು/ಶಿಕ್ಷಕಿಯರು, ಸಂಘ ಸಂಸ್ಥೆಯ ಮುಖಂಡರು ಅಭಿನಂದಿಸಿದ್ದಾರೆ. ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನನ್ನ ಗೆಲುವಿಗೆ ಕಾರಣಿಭೂತರಾದ ಮತ್ತು ಪ್ರತ್ಯಕ್ಷ/ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ನನ್ನನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ನನ್ನ ಸಹಪಾಠಿ ಮತದಾರರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುತ್ತೇವೆಂದು ಹೇಳಿದರು.

Leave a Reply

Your email address will not be published. Required fields are marked *