ಗಮನ ಸೆಳೆದ ಶ್ರೀ ಚನ್ನಬಸವ ತಾತನ ನಾಟಕ …

ಗಮನ ಸೆಳೆದ ಶ್ರೀ ಚನ್ನಬಸವ ತಾತನ ನಾಟಕ …

ಗಂಗಾವತಿ : ಇಲ್ಲಿನ ಪಬ್ಲಿಕ್ ಕ್ಲಬ್ ನಲ್ಲಿ ನೂತನ ‘ಕಲಾನಿಕೇತನ’ ಕಲಾಭವನ ಉದ್ಘಾಟನೆ ಅಂಗವಾಗಿ ಪ್ರದರ್ಶನಗೊಂಡ ಶ್ರೀ ಚನ್ನಬಸವ ಸ್ವಾಮಿ ತಾತನ ನಾಟಕವು ರಂಗಾಸಕ್ತರ ಗಮನ ಸೆಳೆಯಿತು. ಸಾಂಸ್ಕೃತಿಕ ವೇದಿಕೆ ಸಾರಥ್ಯದಲ್ಲಿ ದಂತ ವೈದ್ಯ ಡಾ.ಶಿವಕುಮಾರ ಮಾಲಿ ಪಾಟೀಲ್ ಅವರ ಆಶಯ ಹಾಗೂ ಸಹಕಾರದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಶ್ರೀ ಚನ್ನಬಸವ ಸ್ವಾಮಿ ತಾತನವರ ಹುಟ್ಟು, ಬಾಲ್ಯ, ಅಧ್ಯಯನ ಸೇರಿ ಅವರು ಬದುಕಿ ಬಾಳಿದ ರೀತಿ, ಅವರ ನಡೆ ನುಡಿ, ವಿಚಾರಧಾರೆ, ಸಂದೇಶ……. ಹೀಗೆ ಅನೇಕ ವಿಷಯ ಒಳಗೊಂಡ ಹವ್ಯಾಸಿ ನಾಟಕವನ್ನು ನಾಟಕಕಾರ ಕೆ.ಪಂಪಣ್ಣ ರಚಿಸಿದ್ದು ಶ್ರೀ ಚನ್ನಬಸವ ಸ್ವಾಮಿ ತಾತನ ಪಾತ್ರದಲ್ಲಿ ಕಲಾವಿದ ಟಿ.ಹನುಮಂತಪ್ಪ ಮನೋಜ್ಞವಾಗಿ ಅಭಿನಯಿಸಿ ಮೆರುಗು ತಂದರು.ಕಲಾವಿದರಾದ ಡಿ.ವೆಂಕಟೇಶ(ಬೋಕಾಳಿ), ಚನ್ನಬಸವಯ್ಯ ಬಿ.ಟಿ.(ಘನಮಠಾರ್ಯ), ಎಸ್.ಬಸವರಾಜ(ಮಹಾಲಿಂಗ ಸ್ವಾಮಿ), ಛತ್ರಪ್ಪ ತಂಬೂರಿ(ವಿಜಯ ಮಹಾಂತೇಶ ಮತ್ತು ಪತ್ರೆಪ್ಪಸ್ವಾಮಿ), ಕೆ.ಪಂಪಣ್ಣ(ಹುಚ್ಚೇಶ್ವರಸ್ವಾಮಿ ಮತ್ತು ಅರಳಿ ಗುಂಡಪ್ಪ), ಡಿ.ತಿಮ್ಮಣ್ಣ ಡಂಕನಕಲ್ (ಕೊಟ್ಟೂರುಸ್ವಾಮಿ), ಶರಣಪ್ಪ ನಾಯಕ(ಜಂಬಣ್ಣ), ಗಫೂರಸಾಬ್(ಅಲ್ಲಿಸಾಬ್), ಶಾಮೀದ್ ಲಾಠಿ(ಮರುಳು ಸಿದ್ದಯ್ಯ ಮತ್ತು ಗುಲಾಂಸಾಬ್), ನಿಂಗಪ್ಪ ಸುದ್ದಿ(ಗುರಯ್ಯ ಮತ್ತು ಭಕ್ತ), ಶಿವಕುಮಾರ್ ಹಾದಿಮನಿ(ಚೆನ್ನಯ್ಯ ಮತ್ತು ಭರಮಣ್ಣ ನಾಯಕ), ಭೀಮನಗೌಡ(ಶರಣಬಸವ, ಶಿವಯ್ಯ ಮತ್ತು ಶಿವಣ್ಣ), ಹೆಚ್.ರೋಣದ(ಭಕ್ತ), ಮುತ್ತುರಾಜ್(ಭಕ್ತ), ಚಿದಾನಂದ ಕೀರ್ತಿ(ದಿಗಂಬರಯ್ಯ ಮತ್ತು ಮಹಾಂತಯ್ಯ), ಶಶಿಕಲಾ ಕುರುಗೋಡು(ಗೌರಮ್ಮ ಮತ್ತು ಫಾತೀಮಾ), ರಾಧಾ ಉಮೇಶ್(ನೀಲಮ್ಮ ಮತ್ತು ಮಲ್ಲಮ್ಮ), ರತ್ನಮ್ಮ ಅರೆಗಾರ(ಭಕ್ತಳು), ಎ.ಕೆ.ಆದಿತ್ಯ(ಬಾಲ ಚನ್ನಬಸವ) ನಾಟಕದ ಪಾತ್ರಗಳಲ್ಲಿ ಅಭಿನಯಿಸಿದರು. ನಾದಯೋಗಿ ಸಂಗೀತ ಬಳಗದ ಶರಣಪ್ಪ ಹಡಪದ ಸಂಗಡಿಗರು ಸಂಗೀತ ನಿರ್ವಹಿಸಿ ನಾಟಕಕ್ಕೆ ಕಳೆ ಕಟ್ಟಿದರು. ಭದ್ರಾವತಿಯ ವೈ.ಕೆ.ಹನುಮಂತಯ್ಯ ಮೇಕಪ್ ನಿರ್ವಹಿಸಿದ್ದರು. ನೀನಾಸಂ ರಂಗ ಶಿಕ್ಷಣ ಪದವೀಧರ ಎಂ.ಪರಶುರಾಮ ಪ್ರಿಯ ರಂಗ ವಿನ್ಯಾಸ ಮಾಡಿ ನಾಟಕ ನಿರ್ದೇಶನ ಮಾಡಿದ್ದರು.

Leave a Reply

Your email address will not be published. Required fields are marked *