ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದ ಸಂಗಮೇಶ್ವರ ರಥೋತ್ಸವ.

ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದ ಸಂಗಮೇಶ್ವರ ರಥೋತ್ಸವ.

ಬಳ್ಳಾರಿ / ಕಂಪ್ಲಿ: ತಾಲೂಕಿನ ಸಣಾಪುರ ಗ್ರಾಪಂ ವ್ಯಾಪ್ತಿಯ ಇಟಗಿ ಗ್ರಾಮದ ಸಂಗಮೇಶ್ವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೋಮವಾರ ಸಂಜೆ ಜರುಗಿತು. ಇಲ್ಲಿನ ದೇವಸ್ಥಾನ ಬಳಿಯಲ್ಲಿ ಆರಂಭಗೊಂಡು ಮುಖ್ಯರಸ್ತೆ ಮೂಲಕ ಎದುರು ಬಸವಣ್ಣ ದೇವಸ್ಥಾನವರೆಗೆ ತೆರಳಿ, ಪುನಃ ದೇವಸ್ಥಾನ ಬಳಿ ಸಂಪನ್ನಗೊಂಡಿತು. ಭಕ್ತರು ರಥೋತ್ಸವಕ್ಕೆ ಉತ್ತುತ್ತಿ, ಬಿಲ್ವಪತ್ರಿ, ಹೂವು ಎಸೆಯುವ ಮೂಲಕ ಭಕ್ತಿ ಮೆರೆದರು. ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ರಥೋತ್ಸವ ಎಳೆಯುವ ಮುಂಚಿತವಾಗಿ ರಥಕ್ಕೆ ಭಕ್ತರು, ಸಮಾಜದವರು ಬೃಹತ್ ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು, ಹಾಕಲಾಯಿತು. ಯುವಕರು ತಮಟೆ ನಾದಕ್ಕೆ ಹೆಜ್ಜೆ ಹಾಕಿದರು. ಇಲ್ಲಿನ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ, ಮಂಗಳಾರತಿ, ಪುಷ್ಪಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶ್ರದ್ದೆಯಿಂದ ಜರುಗಿದವು. ಭಕ್ತರು ಕಾಯಿ, ಕರ್ಪುರ ಅರ್ಪಿಸಿ, ಪುನೀತರಾದರು. ಈ ಸಂದರ್ಭದಲ್ಲಿ ಮುಖಂಡರಾದ ಪಂಪಾಪತಿಗೌಡ, ಭೀಮನಗೌಡ, ಶರಣಬಸವ, ಬಸಲಿಂಗಪ್ಪ, ರಾಯನಗೌಡ, ಇಟಗಿ ಬಸವರಾಜಗೌಡ, ಶೇಖರಪ್ಪ, ರವೀಂದ್ರಗೌಡ ಸೇರಿದಂತೆ ಇಟಗಿ ಮತ್ತು ಸುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *