ಕನಕಗಿರಿ ತಾಲೂಕಿನಲ್ಲಿ ಅನಧಿಕೃತ ಮರಳು ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳ ಮೇಲೆ ತಹಶಿಲ್ದಾ‌ರ್ ವಿಶ್ವನಾಥ್ ಮುರುಡಿ ದಾಳಿ..

ಕನಕಗಿರಿ ತಾಲೂಕಿನಲ್ಲಿ ಅನಧಿಕೃತ ಮರಳು ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳ ಮೇಲೆ ತಹಶಿಲ್ದಾ‌ರ್ ವಿಶ್ವನಾಥ್ ಮುರುಡಿ ದಾಳಿ..

.ಕನಕಗಿರಿ: ತಾಲೂಕಿನ ಬುನ್ನಟ್ಟಿ, ಯತ್ನಟ್ಟಿ, ಉದ್ದಿಹಾಳ, ಈಚನಾಳ, ಕ್ಯಾರಿಹಾಳ, ಸಂಕನಾಳ, ನವಲಿ ಗ್ರಾಮದಲ್ಲಿ ಅಕ್ರಮ ಮರಳ ಪಾಯಿಂಟ ದಂದೆ ಕೋರರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ದಾಳಿ ನಡಿಸಿ ದಂದೆಕೋರರ ಮೇಲೆ ದಂಡ ಹಾಕಿ ದ್ದಾರೆ. ರೈತರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಮಾಹಿತಿಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಸ್ಥಳದಲ್ಲಿದ್ದ ಪೈಪ್, ಮತ್ತು ಗಣಿಗಾರಿಕೆ ಉಪಕ ರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಮರಳು ಮಾಫಿಯಾದ ಅಕ್ರಮ ಚಟುವಟಿಕೆಗಳಿಂದ ಪರಿಸರ ಹಾನಿ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳಿಗೆ ತಾತ್ಕಾಲಿಕವಾಗಿ ಕಡಿವಾಣ ಬಿದ್ದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಲವು ದದಿನಗಳಿಂದ ಟಾಕ್ಟರ್ ಟಿಪ್ಪರ್ ನಿಂದು ವಾಹನ ಬಳಿಕೆ ಮಾಡುವ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸುತ್ತಿದ್ದರು ಎಂಬ ಮಾಹಿತಿ ನಿರಂತರವಾಗಿ ಲಭ್ಯ ವಾಗುತ್ತಿತ್ತು.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಒಟ್ಟಾರೆ 205 ಟನ್ ಮರಳನ್ನು ವಶಕ್ಕೆ ಪಡೆದು ಜಿಲ್ಲಾ ಮರಳು ಸಮಿತಿ ನಿಗದಿಪಡಿಸಿರುವ ದರದಂತೆ ಒಟ್ಟು ರೂ.146500/- ಗಳನ್ನು ಕೈ ಭರಣ ಮಾಡಿಸಿ ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ ಎಂದು ತಸಿಲ್ದಾರ್ ವಿಶ್ವನಾಥ್ ಮುರಡಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಹಾಗೂ ಸಿಬ್ಬಂದಿಗಳು, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕೆ ರಾಜಶೇಖರ್ ಮತ್ತು ನಾಗರಜ್, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಕೊಪ್ಪಳ ಹಾಗೂ ಸಿಬ್ಬಂದಿ ಎಂ.ಡಿ. ಫೈಸಲ್ ಪಿ.ಐ. ಕನಕಗಿರಿ ಠಾಣೆ ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

ರಮೇಶ್ ಈಳಿಗೇರ್ ವಾಲ್ಮೀಕಿ ಅಸ್ತ್ರ ನ್ಯೂಸ್ ಕನಕಗಿರಿ ತಾಲೂಕಿನ ವರದಿಗಾರ ಪೋನ್ ನೋ 9035332032“

Leave a Reply

Your email address will not be published. Required fields are marked *