ವಾಸ್ತು ತಜ್ಞ ಮಂಜುನಾಥ್ ಕುರುಗೋಡು ಅವರಿಗೆ ಸನ್ಮಾನ. ವಾಸ್ತುವೇ ಜೀವನ. ಆರ್ ಬಿ ಪಾಟೀಲ್….

ವಾಸ್ತು ತಜ್ಞ ಮಂಜುನಾಥ್ ಕುರುಗೋಡು ಅವರಿಗೆ ಸನ್ಮಾನ. ವಾಸ್ತುವೇ ಜೀವನ. ಆರ್ ಬಿ ಪಾಟೀಲ್….

ಗಂಗಾವತಿ.. ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಅವರಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೊಡಲ್ಪಡುವ ರಾಜ್ಯಮಟ್ಟದ ವಾಸ್ತು ತಜ್ಞ. ಪ್ರಶಸ್ತಿ ಹಾಗೂ. ಎ ಎಸ್ ಐ ಎ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಡಾಕ್ಟರ್ ಮಂಜುನಾಥ್ ಅವರ ನಿವಾಸಕ್ಕೆ ತೆರಳಿ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ಆಲ್ ಇಂಡಿಯಾ ಮಜದೂರು ಯೂನಿಯಲಿನ ರಾಷ್ಟ್ರೀಯ ಅಧ್ಯಕ್ಷರಾದ ಆರ್ ಬಿ ಪಾಟೀಲ್ ಅವರು ಗುರುವಾರದಂದು ಡಾಕ್ಟರ ಮಂಜುನಾಥ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು ಬಳಿಕ ಅವರು ಮಾತನಾಡಿ ಉತ್ತರ ಕರ್ನಾಟಕ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾಸ್ತು ಕ್ಷೇತ್ರದಲ್ಲಿ ಅವರ ತಂದೆಯವರಾದ ಕುರುಗುಡ್ ಸಣ್ಣ ಬಸಣ್ಣ ಸಾಹುಕಾರ್ ಅವರ ದಾರಿಯಲ್ಲಿ ಅವರ ಪುತ್ರ ಸಾಗುತ್ತಿರುವುದು ಹರ್ಷದಾಯಕ. ಒಂದು ಕುಟುಂಬ ಸುಖ ಶಾಂತಿ ಸಮೃದ್ಧಿ ಸಹಬಾಳ್ವೆಯಿಂದ ಜೀವಿಸಲು ಅವರು ವಾಸ ಮಾಡುವ ಮನೆ ವಾಸ್ತು ಪ್ರಕಾರ ಇದ್ದಲ್ಲಿ ಮಾತ್ರ ಸುಖಿ ಜೀವನ ನಡೆಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ವಾಸ್ತು ತಜ್ಞರಾದ ಡಾಕ್ಟರ್ ಮಂಜುನಾಥ್ ಅವರು ಈಗಾಗಲೇ ರಾಜ್ಯದ ನಾನಾ ಭಾಗಗಳಲ್ಲಿ ಮನೆ ದೇವಸ್ಥಾನ. ಇತರೆ ಕಟ್ಟಡಗಳಿಗೆ ವಾಸ್ತು ಶಾಸ್ತ್ರವನ್ನು ಮಾರ್ಗದರ್ಶನ ಮಾಡುತ್ತಿದ್ದು ಇದರ ಸದುಪಯೋಗವನ್ನು ಸರ್ವರೂ ಪಡೆದುಕೊಳ್ಳಬೇಕೆಂದು ಆಶಿಸಿದರು. ಈ ಸಂದರ್ಭದಲ್ಲಿ ಕುರುಗೋಡು ಕುಟುಂಬಸ್ಥರು. ಹಿರಿಯ ಪತ್ರಕರ್ತರಾದ ಪಿ ದಶರಥ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *