ಮೂವ್ವರಿಗೆ ‘ಬಸವ ಕಾಯಕರತ್ನ’ ಪ್ರಶಸ್ತಿ ಪ್ರದಾನ…

ಗಂಗಾವತಿ : ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಜೈನ್ ಯಾತ್ರಾ ನಿವಾಸದ ಸಭಾಂಗಣದಲ್ಲಿ ಶನಿವಾರ ಫೆಬ್ರವರಿ ರಾತ್ರಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಗರದ ಮೂವ್ವರಿಗೆ ‘ಬಸವ ಕಾಯಕರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರ್ಗಿ-ಶಹಪುರ ಜಿಲ್ಲೆಗಳ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಎಂ.ಪರಶುರಾಮ ಪ್ರಿಯ (ರಂಗಭೂಮಿ), ಮಲ್ಲಾಪುರದ ಹನುಮಂತಪ್ಪ ಗೂಗಿಬಂಡಿ (ರಂಗಭೂಮಿ), ಡಿ.ಆಂಜನೇಯ(ಸಂಘಟನೆ) ಅವರುಗಳಿಗೆ ಬಸವ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವರಲಿಂಗೇಶ್ವರಸ್ವಾಮೀಜಿ, ಸುನೀತಾ ಖೇಮಲಾಪುರೆ, ಅನ್ನಪೂರ್ಣ ಸಂಗೊಳಗಿ, ಮಹೆಬೂಬ ನದಾಫ್ ಹಾಗೂ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಧಕರು ಉಪಸ್ಥಿತರಿದ್ದರು.

