ಕಿಷ್ಕಿಂದ ಅಂಜನಾದ್ರಿ ಭಕ್ತಾದಿಗಳಿಗೆ ಶ್ರೀ ವಿದ್ಯಾದಾಸ್ ಬಾಬಾ ಬೆಳಕಿನ ವ್ಯವಸ್ಥೆ. ..

ಗಂಗಾವತಿ.. ಐತಿಹಾಸಿಕ ಹಿನ್ನೆಲೆ ಹೊಂದಿರುವ ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡು ಎಂದು ಹೆಸರುವಾಸಿಯಾದ ಆನೆಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ರಾಂಪುರ್ ಬಳಿಯ ಕಿಷ್ಕಿಂದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ ದೇವಸ್ಥಾನದ ಪ್ರಧಾನ ಅಂಜನಾದ್ರಿ ಪೀಠಾಧಿಪತಿಶ್ರೀ ವಿದ್ಯಾದಾಸ್ ಬಾಬಾಜಿಯವರು. ವಿದ್ಯುತ್ ದೀಪಗಳ ಅಳವಡಿಕೆಗೆ ಮುಂದಾಗಿದ್ದಾರೆ ಪರಮಪೂಜ್ಯಶ್ರೀ ವಿದ್ಯಾದಾ ಅವರು ಮಾಧ್ಯಮದೊಂದಿಗೆ ಮಾತನಾಡಿ ಇತ್ತೀಚಿಗಷ್ಟೇ ಅಂಜನಾದ್ರಿ ಪರ್ವತದ ಅಂಗಡಿ ಮುಗ್ಗಟ್ಟುಗಳಲ್ಲಿ ಮೂರು ನಾಲ್ಕು ಬಾರಿ ಕಳ್ಳತನ ಜರುಗಿದ್ದು ದೇವಸ್ಥಾನದ ಕೆಳಗೆ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದೆ ಕತ್ತಲು ಹೊಂದಿದ ಪ್ರಯುಕ್ತ ಕಳ್ಳತನ. ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಮುಖ ಕಾರಣವಾಗಿದ್ದು ಪ್ರಯುಕ್ತ ವಿದ್ಯುತ್ ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಹಾಯಕ ಆಯುಕ್ತರು. ಹಾಗೂ ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆ ಮತ್ತು ಭಕ್ತಾದಿಗಳು ಮನವಿ ಮಾಡಿಕೊಂಡರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ಬಗ್ಗೆ ಈ ಕುರಿತು ತಮ್ಮ ಶಿಷ್ಯ ವೃಂದಕ್ಕೆ ತಿಳಿಸಿದಾಗ ಶ್ರೀ ಹನುಮಾ ದೇವಸ್ಥಾನ ವಿಕಾಸ್ ಟ್ರಸ್ಟ್ ವತಿಯಿಂದ ವಿದ್ಯುತ್ ದೀಪಗಳ ಅಳವಡಿಕೆಗೆ ಮುಂದಾಗಿದ್ದೇವೆ ತನುಮನ ಧನಗಳಿಂದ ಸಹಕಾರ ನೀಡುವುದಾಗಿ ಹೇಳಿದ್ದೆವು ಹಾಗೆ ಈ ದಿನ ವಿದ್ಯುತ್ ದೀಪಗಳನ್ನು ಅಳವಡಿಸಲು ಪ್ರಾರಂಭಿಸಿದ್ದು ಬರುವಂತ ಭಕ್ತಾದಿಗಳಿಗೆ ಅನುಕೂಲ ಮತ್ತು ಇನ್ನಿತರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪೊಲೀಸ್ ಇಲಾಖೆಗೆ ಸಹಕಾರವಾಗುತ್ತದೆ. ಬರುವಂತಹ ಭಕ್ತಾದಿಗಳು ರಾತ್ರಿ ವೇಳೆ ವನ್ಯಜೀವಿಗಳ ಕಾಟವು ಕೂಡ ತಪ್ಪುತ್ತದೆ ಎಂದು ವಿದ್ಯಾದಾಸ್ ಬಾಬಾ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ಹಿಂದುತ್ವವಾದಿ ಬಾಲಾಜಿ ಹನುಮನಹಳ್ಳಿ ವೆಂಕಟರೆಡ್ಡಿ ನಾರಾಯಣಗೌಡ ಮಲ್ಲಾಪುರ್ ಹಂಪೆಶ್ ಅರಿಗೋಲ್ ಕೆ.ಕಾವ್ಯ ಶರಣೆಗೌಡ ಕೆಸರಟ್ಟಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
