ಕಿಷ್ಕಿಂದ ವೀಲ್ ಚೇರ್ ಕ್ರಿಕೆಟ್ ಮತ್ತು ಸಿಟ್ಟಿಂಗ್ ಕ್ರಿಕೆಟ್ ಟ್ರೋಪಿ ಉದ್ಘಾಟನೆ.. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿವ್ಯಾಂಗರಿಗೆ ರಣಜಿ ಹಾಗೂ ಐಪಿಎಲ್ ಮಾದರಿಯ ಪಂದ್ಯಾವಳಿಯ ಮುಂದಾಗಬೇಕು…. ನಿವೃತ್ತ ಯೋಧ ಶಿವನಗೌಡ ತೆಗ್ಗಿ ಗೌಡ್ರು.

ಗಂಗಾವತಿ.. ದಿವ್ಯಾಂಗರಿಗೆ ಅನುಕಂಪ ತೋರಿಸದೆ ಸೂಕ್ತವಾದ ಅವಕಾಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ರಣಜಿ ಹಾಗೂ ಐಪಿಎಲ್ ಮಾದರಿಯ ಪಂದ್ಯಾವಳಿಗಳನ್ನು ನಡೆಸುವುದರ ಮೂಲಕ ಅವರಲ್ಲಿನ ಪ್ರತಿಭೆಯನ್ನು ಬೆಳಗಿಸುವ ಕಾರ್ಯವಾಗಬೇಕೆಂದು ನಿವೃತ್ತ ಯೋಧ. ಕ್ಯಾಪ್ಟನ್ ಶಿವನ ಗೌಡ ತೆಗ್ಗಿ ಗೌಡ್ರು ಹೇಳಿದರು.

ಅವರು ಗುರುವಾರದಂದು. ಕಿಷ್ಕಿಂದ ಕಿಂಗ್ಸ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಗಂಗಾವತಿ ಹಾಗೂ ಇತರ ಸಂಘ-ಸಂಸ್ಥೆಗಳೊಂದಿಗೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 12 ರಿಂದ 15 ರವರೆಗೆ ಜರುಗಲಿರುವ ರಾಜ್ಯಮಟ್ಟದ ವೀಲ್ ಚೇರ್ ಕ್ರಿಕೆಟ್ ಮತ್ತು ಸಿಟ್ಟಿಂಗ್ ಕ್ರಿಕೆಟ್ ಪಂದ್ಯಾವಳಿಯ ಕ್ರಿಕೆಟ್ ಟ್ರೋಫಿ ಉದ್ಘಾಟನೆಯನ್ನು ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ದಿವ್ಯಾಂಗರು ಅನೇಕರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವೀಲ್ ಚೇರ್ ಹಾಗೂ ಸಿಟ್ಟಿಂಗ್ ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಧನೆ ಮಾಡಿರುವುದು ಅತ್ಯಂತ ಅತ್ಯುತ್ತಮ ಕಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ಇದೇ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸರ್ಕಾರಗಳು ಆಯೋಜಿಸುವುದರ ಮೂಲಕ ಅವರಲ್ಲಿನ ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವನೆಯನ್ನು ಗೌರವಿಸುವುದರ ಮೂಲಕ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು. ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಡಾಕ್ಟರ್ ಅಶೋಕ್ ದೊಂಬರ ಮಾತನಾಡಿ ಇಂದು ನಡೆಯಬೇಕಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಮಳೆರಾಯನ ಕೃಪೆಯಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸುವ ನಿರ್ಧಾರವನ್ನು ಅಕಾಡೆಮಿ ತೆಗೆದುಕೊಳ್ಳಲಾಗಿದ್ದು. ಪ್ರಯುಕ್ತ ದಿವ್ಯಾಂಗ ಆಟಗಾರರು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಆಸಿಫ್ ಹುಸೇನ್ ಸೈಯದ್ ಮೀರಾ ಮತಿನ್ ಪಿಯಾ ನಾಯಕ್ ಸೈಯದ್ ಅಸ್ಲಂ ಗೋನಾಳ್ ಬಸವರಾಜ್ ಅಸಾದ್ ಉಲ್ಲ ಎಲ್ಲಪ್ಪ ಅಬ್ರಹಾಮ್ ಖಾದರ್ ಭಾಷಾ ಹುಲಿಗೇಶ್ ಇತರರು ಉಪಸ್ಥಿತರಿದ್ದರು….
