ವಸಂತರಾಜ ಕಹಳೆ ಅವರಿಂದ ಸುದ್ದಿಗೋಷ್ಠಿ ಅಗಸ್ಟ್ 11 ರಿಂದ ಅಹೋರಾತ್ರಿ ಸತ್ಯಾಗ್ರಹ…

ವಸಂತರಾಜ ಕಹಳೆ ಅವರಿಂದ ಸುದ್ದಿಗೋಷ್ಠಿ ಅಗಸ್ಟ್ 11 ರಿಂದ ಅಹೋರಾತ್ರಿ ಸತ್ಯಾಗ್ರಹ…

ದಿನಾಂಕ 22/7/2026 ಇಂದು ಸಾಮಾಜಿಕ ನ್ಯಾಯಕ್ಕಾಗಿಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ. ನ್ಯಾ.ಹೆಚ್.ಎನ್.ನಾಗಮೋಹನ್‌ದಾಸ್ ರವರ ಸಮೀಕ್ಷಾ ವರದಿ ಜುಲೈ 30ರೊಳಗೆ ಸಲ್ಲಿಕೆಯಾಗಲಿ,ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲಿ ಒಳಮೀಸಲಾತಿ ಈಡೇರಿಕೆಗಾಗಿ ತಮ್ಮ ಬದ್ಧತೆಯನ್ನುಪ್ರಕಟಿಸಲಿ..ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಅಂಗೀಕರಿಸಲು ಆಗ್ರಹಿಸಿ ಆಗಸ್ಟ್ 11 ರಿಂದಅನಿರ್ಧಿಷ್ಠ ಅಹೋರಾತ್ರಿ ಸತ್ಯಾಗ್ರಹ ಆರಂಭಆಗಸ್ಟ್ 1 2024 ರಂದು ಘನ ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಠರ ಬಹುದಿನಗಳಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂಬ ಐತಿಹಾಸಿಕತೀರ್ಪನ್ನು ನೀಡಿ ಒಂದುವರ್ಷ ಗತಿಸುತ್ತಿದೆ. ಎರಡೇ ತಿಂಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಜನಸಂಖ್ಯಾ ಸಮೀಕ್ಷೆಯನ್ನು ಪೂರ್ಣಗೊಳಿಸಿ ತಮ್ಮ ನೈತಿಕ ಜವಾಬ್ದಾರಿಯನ್ನು ಪೂರೈಸಿದ್ದರೆ30ವರ್ಷಗಳ ಒಳಮೀಸಲಾತಿ ಹೋರಾಟವು ಮತ್ತೊಂದು ಸುತ್ತಿನ ಹೋರಾಟವಾಗಿ ಪರಿವರ್ತನೆಯಾಗುವಅಗತ್ಯವಿರಲಿಲ್ಲ.

ಈಗಲಾದರೂ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸದೇ, ಆಡಳಿತರೂಢಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ತಮ್ಮಬದ್ಧತೆಯನ್ನು ಪ್ರಕಟಿಸಬೇಕಾಗಿದೆ. ಏಕೆಂದರೆ. ಜಸ್ಟಿಸ್ ನಾಗಮೋಹನ್ ದಾಸ್‌ರವರ ನೇತೃತ್ವದಲ್ಲಿನೇಮಕವಾದ ಏಕಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವೈಜ್ಞಾನಿಕಹಾಗೂ ವಸ್ತುನಿಷ್ಠ ವರದಿಯನ್ನು ಜುಲೈ 30ರೊಳಗಡೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ.ಹಾಗಾಗಿ ವರದಿಯನ್ನು ಆದಷ್ಟು ಬೇಗ ಪಡೆದು ಆಗಸ್ಟ್ 11 ರಿಂದ ಆರಂಭವಾಗಲಿರುವಅಧಿವೇಶನದಲ್ಲಿ ಸರ್ವಪಕ್ಷಗಳ ಅನುಮೋದನೆಯೊಂದಿಗೆ ಒಳಮೀಸಲಾತಿ ಬೇಡಿಕೆಯನ್ನುಅಂಗೀಕರಿಸಿದರೆ, ನೇಮಕಾತಿ ಆಗಬೇಕಾದ 30 ಸಾವಿರಕ್ಕೂ ಅಧಿಕ ಹುದ್ದೆಗಳು ವಂಚಿತ ನಿರುದ್ಯೋಗಿಯುವಕ, ಯುವತಿಯರು ಪಡೆಯಬಹುದಾಗಿದೆ. ವಿಷಾದಕರ ಸಂಗತಿ ಎಂದರೆ ಕಳೆದ 30ವರ್ಷಗಳಲ್ಲಿಆಯೋಗ ನೇಮಕವಾಗಲು, ನೇಮಕವಾದ ಆಯೋಗಕ್ಕೆ ಅನುದಾನ ನೀಡಲು, ಸರ್ಕಾರಕ್ಕೆ ಒಪ್ಪಿಸಿದವರದಿಯನ್ನು ಅನುಷ್ಠಾನಗೊಳಿಸಲು 3 ದಶಕಗಳ ವಿಳಂಬ ಮುಂದುವರೆದಿರುವುದರಿಂದ ನೊಂದಸಮುದಾಯಗಳು ಯಾವುದೇ ಸರ್ಕಾರಗಳನ್ನು ನಂಬುವ ಸ್ಥಿತಿಯಲ್ಲಿಲ್ಲ.ಈ ಎಲ್ಲಾ ಕಹಿ ಅನುಭವಗಳು ಮುಂದುವರೆಯದಂತೆ ಸರ್ಕಾರವು ಆಗಸ್ಟ್ 11 ರಿಂದಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವತೀರ್ಮಾನವನ್ನು ಕೈಗೊಳ್ಳುವ ಮೂಲಕ ನುಡಿದಂತೆ ನಡೆಯಲು ಆಗ್ರಹಿಸಿ ದಿನಾಂಕ: 11-08-2025ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರುಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇವೆ. ಇದು ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ವಸಂತ್ ರಾಜ್ ಕಾಹಳೆ ಎಚ್ ಬಸಪ್ಪ ಧನಂಜಯ್ ಮೆಟ್ರಿ ಬಸಪ್ಪ ಎಚ್ ಎಲ್ಲಪ್ಪ ಶಾಂತ ಮೂರ್ತಿ ಮಲ್ಲಿಕಾರ್ಜುನ್ ಸಂದರ್ಭದಲ್ಲಿ ಹಾಜರಿದ್ದರು.

ವರದಿಗಾರರ✍️✍️✍️ ಪಿ. ದಶರತ್ ವಾಲ್ಮೀಕಿ ಅಸ್ತರ ನ್ಯೂಸ್ ಸುದ್ದಿಗಾಗಿ ಸಂಪರ್ಕಿಸಿ:>948276 668 9

Leave a Reply

Your email address will not be published. Required fields are marked *