ಶ್ರೀಮತಿ ಜಯಶ್ರೀ ಹಕ್ಕಂಡಿ ಅಳವಂಡಿ ಅವರ ಕೃತಿಗಳ ಲೋಕಾರ್ಪಣೆ…

ಗಂಗಾವತಿ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕೊಪ್ಪಳ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕ ಗಂಗಾವತಿ ಭರತ ದಿತ್ತಿ ಪ್ರಕಾಶನ ಗಂಗಾವತಿ ಇವರಿಂದ ರವಿವಾರದಂದು ಭಾರತೀಯ ವೈದ್ಯಕೀಯ ಭವನದಲ್ಲಿ ಶ್ರೀಮತಿ ಜಯಶ್ರೀ ಶರಣಪ್ಪ ಹಕ್ಕಂಡಿ ಅಳವಂಡಿ ಅವರ ಕೃತಿಗಳ ಲೋಕಾರ್ಪಣೆ ಬೆಳಿಗ್ಗೆ 10 ಗಂಟೆಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವೇದಿಕೆಯಲ್ಲಿನ ಗಣ್ಯರು ಉದ್ಘಾಟಿಸಿದರು. ಬಳಿಕ ಮಾಜಿಶಾಸಕ ಪರಣ್ಣ ಮುನವಳ್ಳಿ ಮಾತನಾಡಿ. ಭತ್ತದ ಕಣಜ ಈಗ ಸಾಹಿತ್ಯದ ಕಣಜ ವಾಗಿದೆ.. ಹೆಚ್ಚು ಹೆಚ್ಚು ಸಮಾರಂಭಗಳನ್ನು ಕನ್ನಡ ಸಾಹಿತ್ಯ ಭವ್ಯದಲ್ಲಿ ಆಯೋಜಿಸುವಂತಾಗಬೇಕು ಇದಕ್ಕೆ ಅಗತ್ಯ ಇರುವ ಸೌಲಭ್ಯಗಳನ್ನು ಭವನಕ್ಕೆ ಕಲ್ಪಿಸಬೇಕೆಂದು ತಿಳಿಸಿದರು ಕೃತಿಗಳ ಲೋಕಾರ್ಪಣೆಯನ್ನು ಹಾಸ್ಯ ಸಾಹಿತಿ ಬಿ ಪ್ರಾಣೇಶ್ ನೆರವೇರಿಸಿ ಮಾತನಾಡಿ. ಶ್ರೀಮತಿ ಜಯಶ್ರೀ ಅವರ ಕೃತಿಗಳು ಅತ್ಯಂತ ಅರ್ಥಪೂರ್ಣವಾಗಿದೆ. ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅರ್ಥಪೂರ್ಣವಾದ ಸಾಹಿತ್ಯ ಮುಂದಿನ ತಲೆ ಮಾರೆಗೆ ಇತಿಹಾಸವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ್ ವಹಿಸಿದ್ದರು ಶಿವಲಿಂಗಪ್ಪ ಹಂದ್ರಾಳ ಮುಖ್ಯ ಅತಿಥಿಗಳಾಗಿ ಅಜ್ಮೀರ್ ನಂದ ಪುರ. ಡಾಕ್ಟರ್ ಜಾಜಿ ದೇವೇಂದ್ರಪ್ಪ ಡಾಕ್ಟರ್ ಮುಮ್ತಾಜ್ ಬೇಗಂ ಚನ್ನಬಸಯ್ಯಸ್ವಾಮಿ ಡಾ. ಶಿವಕುಮಾರ್ ಮಾಲಿ ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ. ಡಾಕ್ಟರ್ ಮಲ್ಲನ ಗೌಡ ದೇವೇಂದ್ರ. ಸೇರಿದಂತೆ ಲೇಖಕಿ ಜಯಶ್ರೀ. ಶರಣಪ್ಪ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಶಿಕ್ಷಕರು. ಸಾಹಿತ್ಯ ಅಭಿಮಾನಿಗಳು ಪಾಲ್ಗೊಂಡಿದ್ದರು
